Publish Date: Wed, 11 Mar 2020 (09:50 IST)
Updated Date: Wed, 11 Mar 2020 (09:52 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬರ್ತ್ ಡೇ ಮಾರ್ಚ್ 17 ರಂದು ಇದ್ದು, ಈ ದಿನಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗಲಿದೆ.
ಪುನೀತ್ ರಾಜಕುಮಾರ್ ಬರ್ತ್ ಡೇ ಹಿಂದಿನ ದಿನ ಅಂದರೆ ಮಾರ್ಚ್ 16 ರಂದು ಯುವರತ್ನ ಡೈಲಾಗ್ ಟೀಸರ್ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಪೋಸ್ಟರ್ ಗಳು ಪುನೀತ್ ಈ ಸಿನಿಮಾದಲ್ಲಿ ವೈವಿದ್ಯಮಯ ಪಾತ್ರ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿದೆ.
ಇನ್ನು, ಮಾರ್ಚ್ 17 ರಂದು ಬರ್ತ್ ಡೇ ದಿನ ಜೇಮ್ಸ್ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ. ಈಗಾಗಲೇ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಚಿತ್ರೀಕರಣ ಎರಡನೇ ಹಂತದಲ್ಲಿದ್ದು, ಬರ್ತ್ ಡೇ ದಿನ ಮೋಷನ್ ಪೋಸ್ಟರ್ ಅಭಿಮಾನಿಗಳಿಗೆ ಹಬ್ಬವಾಗಲಿದೆ.