Select Your Language

Notifications

webdunia
webdunia
webdunia
webdunia

ಅಂಧ ಸಹೋದರಿಯರ ಮನೆಗೆ ತಮ್ಮ ಹೆಸರಿಟ್ಟಿದ್ದನ್ನು ಪ್ರಶ್ನಿಸಿದವರಿಗೆ ತಿರುಗೇಟು ಕೊಟ್ಟ ಜಗ್ಗೇಶ್

ಅಂಧ ಸಹೋದರಿಯರ ಮನೆಗೆ ತಮ್ಮ ಹೆಸರಿಟ್ಟಿದ್ದನ್ನು ಪ್ರಶ್ನಿಸಿದವರಿಗೆ ತಿರುಗೇಟು ಕೊಟ್ಟ ಜಗ್ಗೇಶ್
ಬೆಂಗಳೂರು , ಮಂಗಳವಾರ, 10 ಮಾರ್ಚ್ 2020 (11:29 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಮಧುಗಿರಿ ತಾಲೂಕಿನ ಅಂಧ ಸಹೋದರಿಯರಾದ ರತ್ನಮ್ಮ ಮತ್ತು ಮಂಜಮ್ಮ ಅವರಿಗೆ ಮನೆ ಕಟ್ಟಿಸಿಕೊಟ್ಟ ನವರಸನಾಯಕ ಜಗ್ಗೇಶ್ ಗೇ ಈಗ ಟ್ವಿಟರ್ ನಲ್ಲಿ ಟೀಕೆ ವ್ಯಕ್ತವಾಗಿದೆ.

 

ಜಗ್ಗೇಶ್ ಅಭಿಮಾನಿಗಳ ಬಳಗದ ಮೂಲಕ ಅಂಧ ಸಹೋದರಿಯರ ಮನೆ ಮರುನಿರ್ಮಾಣಕ್ಕೆ ಸಹಾಯ ಮಾಡಿದ್ದರು. ಇದಕ್ಕೆ ಕೃತಜ್ಞತೆ ಸಲ್ಲಿಸಿ ಆ ಮನೆಗೆ ಜಗ್ಗೇಶ್-ಪರಿಮಳಾ ನಿಲಯ ಎಂದೇ ಹೆಸರಿಡಲಾಗಿದೆ. ಇದಕ್ಕೆ ಟ್ವಿಟರಿಗರೊಬ್ಬರು ಜಗ್ಗೇಶ್ ಗೆ ಟಾಂಗ್ ಕೊಟ್ಟಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ನಮ್ಮ ಕಾರ್ಯ ದೇವರಿಗೆ ಮೆಚ್ಚುಗೆಯಾಗಬೇಕು. ಅತೃಪ್ತ ಆತ್ಮಗಳಿಗಲ್ಲ. ಹಂಗಿಸುವವರು ಅಸಮರ್ಥರು. ಇಂಥಹವರು ಮೇಲೆ ಬರರು. ಜನಮೆಚ್ಚಿಗೆಗಿಂತ ಜನಾರ್ಧನ ಮೆಚ್ಚುವಂತೆ ಬದುಕುವ ಎಂದು ಜಗ್ಗೇಶ್ ತಿರುಗೇಟು ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ಟೀಸರ್ ಡಿಲೀಟ್ ಪ್ರಕರಣ: ಕಾನೂನು ಸಮರಕ್ಕೆ ಮುಂದಾದ ಚಿತ್ರತಂಡ