Select Your Language

Notifications

webdunia
webdunia
webdunia
webdunia

ಇಂಡಿಯನ್ ಫಿಲಂ ಫೆಸ್ಟಿವಲ್ ನಲ್ಲಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಗೌರವ

ಇಂಡಿಯನ್ ಫಿಲಂ ಫೆಸ್ಟಿವಲ್ ನಲ್ಲಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಗೌರವ
ಬೆಂಗಳೂರು , ಸೋಮವಾರ, 9 ಮಾರ್ಚ್ 2020 (09:40 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ‘ಅಮೃತಮತಿ’ ಎಂಬ ಐತಿಹಾಸಿಕ ಸಿನಿಮಾದ ಪಾತ್ರಕ್ಕಾಗಿ ‘ಇಂಡಿಯನ್ ಫಿಲಂ ಫೆಸ್ಟಿವಲ್’ ನಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ.


ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಐತಿಹಾಸಿಕ ಸಿನಿಮಾವಾಗಿದ್ದು, ಇದರಲ್ಲಿ ಹರಿಪ್ರಿಯಾ ಅಮೃತಮತಿ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿನ ಅವರ ಶ್ರೇಷ್ಠ ಅಭಿನಯಕ್ಕಾಗಿ ಪ್ರಶಸ್ತಿ ಲಭಿಸಿದೆ.

ಈ ಖುಷಿ ವಿಚಾರವನ್ನು ಹಂಚಿಕೊಂಡಿರುವ ಹರಿಪ್ರಿಯಾ ಮಹಿಳಾ ದಿನಾಚರಣೆಯಂದೇ ನನಗೆ ಈ ಮಹಿಳಾ ಪ್ರಧಾನ ಕಥಾ ವಸ್ತು ಹೊಂದಿದ್ದ ಪಾತ್ರಕ್ಕೆ ಪ್ರಶಸ್ತಿ ಸಂದಿರುವುದು ಖುಷಿ ತಂದಿದೆ. ಈ ಪ್ರಶಸ್ತಿಯನ್ನು ನನ್ನ ಅಮ್ಮ ಹಾಗೂ ಎಲ್ಲಾ ಮಹಿಳೆಯರಿಗೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ಟೀಸರ್ ಯೂ ಟ್ಯೂಬ್ ನಿಂದ ನಾಪತ್ತೆ ವಿವಾದದ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟನೆ