Select Your Language

Notifications

webdunia
webdunia
webdunia
webdunia

ದರ್ಶನ್ ಹೆಸರಿನಲ್ಲಿ ಅಭಿಮಾನಿಯ ಅಶ್ಲೀಲ ಟ್ವೀಟ್: ಕಿಚ್ಚ ಸುದೀಪ್ ಫುಲ್ ಗರಂ

ದರ್ಶನ್ ಹೆಸರಿನಲ್ಲಿ ಅಭಿಮಾನಿಯ ಅಶ್ಲೀಲ ಟ್ವೀಟ್: ಕಿಚ್ಚ ಸುದೀಪ್ ಫುಲ್ ಗರಂ
ಬೆಂಗಳೂರು , ಸೋಮವಾರ, 9 ಮಾರ್ಚ್ 2020 (10:11 IST)
ಬೆಂಗಳೂರು: ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕಿಚ್ಚ ಸುದೀಪ್ ಗೆ ಟ್ವಿಟರ್ ಮೂಲಕ ಅಸಭ್ಯವಾಗಿ ಪದ ಬಳಕೆ ಮಾಡಿ ಟ್ವೀಟ್ ಮಾಡಿದ್ದಾನೆ. ಕೋಟಿಗೊಬ್ಬ 3 ಸಿನಿಮಾ ಟೀಸರ್ ಯೂ ಟ್ಯೂಬ್ ನಿಂದ ಡಿಲೀಟ್ ಆಗಿರುವ ವಿಚಾರಕ್ಕೆ ಯಾರೋ ಬೇಕೆಂದೇ ದರ್ಶನ್ ಹೆಸರು ಹೇಳಿಕೊಂಡು ಸುದೀಪ್ ಗೆ ಟಾಂಗ್ ಕೊಟ್ಟಿದ್ದಾರೆ.


ಶಶಿ ಎಸ್ ಕೆ ಎಂಬ ಹೆಸರಿನ ಟ್ವಿಟರಿಗ ಮಾಡಿದ ಟ್ವೀಟ್ ನಿಂದ ಕಿಚ್ಚ ಸುದೀಪ್‍ ಫುಲ್ ಗರಂ ಆಗಿದ್ದು, ಈತನನ್ನು ಪತ್ತೆ ಮಾಡಿಕೊಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ‘ಮೊದಲು ಇಂಗ್ಲಿಷ್‍ ಆಲೋಚನೆ ಬಿಡು. ಕಳೆದ ಬಾರಿ ಕೈಗೆ ಬಳೆ ಹಾಕಿಕೊಂಡಿಲ್ಲ ಎಂದು ಹೇಳಿ ಗೆದ್ದೆ. ಈಗ ನಿರ್ಮಾಪಕರ ಹತ್ತಿರ ಶೂಟಿಂಗ್ ಮಾಡಕ್ಕೆ ದುಡ್ಡಿಲ್ಲ. ನೀನು ಅನ್ನದಾತರ ಅನ್ನದಾತ ಅಂತೆ. ನಿನ್ನ 25 ವರ್ಷದ ಬಕೆಟ್ ಲೈಫ್ ನ ಜೋಕ್’ ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾನೆ.

ಇದರಿಂದ ಕೆಂಡಾಮಂಡಲರಾಗಿರುವ ಕಿಚ್ಚ ಈ ವ್ಯಕ್ತಿ ಯಾರೆಂದು ಹುಡುಕಿಕೊಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಕಿಚ್ಚನ ಟ್ವೀಟ್ ನೋಡಿ ಕೆಲವು ದರ್ಶನ್ ಅಭಿಮಾನಿಗಳೂ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಹೆಚ್ಚಿನವರು ನಾವು ನಿಜವಾಗಿಯೂ ನೀವು ಇಬ್ಬರೂ ಜತೆಯಿರುವುದನ್ನು ನೋಡಲು ಬಯಸುತ್ತೇವೆ. ಯಾರೋ ಏನೋ ಹೇಳಿದರು ಎಂಬ ಮಾತ್ರಕ್ಕೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮಿಬ್ಬರ ಮೇಲೂ ನಮಗೆ ಗೌರವವಿದೆ ಎಂದಿದ್ದಾರೆ. ದರ್ಶನ್ ಅಭಿಮಾನಿಗಳ ಟ್ವೀಟ್ ಗೆ ಕಿಚ್ಚ ಸುದೀಪ್ ಕೂಡಾ ಪ್ರತಿಕ್ರಿಯಿಸಿದ್ದು, ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾತಿನ ಮಲ್ಲಿ ಅನುಶ್ರೀಗೆ ಸಿಂಪಲ್ ಸ್ಟಾರ್ ರಕ್ಷಿತ್ ರಿಂದ ಬಂತೊಂದು ಉಡುಗೊರೆ!