Publish Date: Mon, 09 Mar 2020 (09:49 IST)
Updated Date: Mon, 09 Mar 2020 (09:52 IST)
ಬೆಂಗಳೂರು: ಆಂಕರ್ ಅನುಶ್ರೀ ಎಂದರೆ ತಮ್ಮ ಅತ್ಯುತ್ತಮ ನಿರೂಪಣೆಯಿಂದಲೇ ಕರ್ನಾಟಕದಾದ್ಯಂತ ಮನೆ ಮಾತಾದವರು. ಇತ್ತೀಚೆಗೆ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಸಿನಿಮಾ ತಾರೆಯರನ್ನು ಕೂರಿಸಿಕೊಂಡು ಸಂದರ್ಶನ ಮಾಡುವ ಮೂಲಕ ಅನುಶ್ರೀ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.
ಇದೀಗ ಅನುಶ್ರೀಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಡೆಯಿಂದ ಉಡುಗೊರೆಯೊಂದು ಬಂದಿದೆ. ಅನುಶ್ರೀ ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಹಾಗೂ ಅವರ ಅವನೇ ಶ್ರೀಮನ್ನಾರಾಯಣ ಸಿನಿಮಾ ತಂಡವನ್ನು ಯೂ ಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನ ಮಾಡಿದ್ದರು.
ಇದೀಗ ನಿನ್ನೆ ಮಹಿಳಾ ದಿನಾಚರಣೆ ಪ್ರಯುಕ್ತ ತಮ್ಮ ನೆಚ್ಚಿನ ಆಂಕರ್ ಅನುಶ್ರೀಗೆ ರಕ್ಷಿತ್ ಗೂಡೀಸ್ ಬ್ಯಾಗ್ ಜತೆಗೆ ಮಹಿಳಾ ದಿನಾಚರಣೆಗೆ ಶುಭಾಷಯ ಕೋರಿ ಪತ್ರವನ್ನೂ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ರಕ್ಷಿತ್ ನೀಡಿರುವ ಉಡುಗೊರೆಯಿಂದ ಖುಷಿಯಾಗಿರುವ ಅನುಶ್ರೀ ರಕ್ಷಿತ್ ನಿಜಕ್ಕೂ ಜಂಟಲ್ ಮ್ಯಾನ್ ಎಂದು ಹೊಗಳಿದ್ದಾರೆ.