Publish Date: Sun, 15 Mar 2020 (08:57 IST)
Updated Date: Sun, 15 Mar 2020 (08:58 IST)
ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ನಾಯಕರಾಗಿರುವ ‘ನಟಭಯಂಕರ’ ಸಿನಿಮಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ.
ಪ್ರಥಮ್ ಸಿನಿಮಾಗೆ ಧ್ರುವ ಧ್ವನಿ ನೀಡಿದ್ದು, ನಯಾ ಪೈಸೆ ತೆಗೆದುಕೊಳ್ಳದೇ ಡಬ್ಬಿಂಗ್ ಮಾಡಿರುವುದಾಗಿ ಪ್ರಥಮ್ ಹೇಳಿಕೊಂಡಿದ್ದಾರೆ.
ಆದರೆ ಚಿತ್ರತಂಡ ಅವರನ್ನು ಹಾಗೇ ಬಿಟ್ಟಿಲ್ಲ. ಗೋ ಆರಾಧಕರಾದ ಧ್ರುವ ಸರ್ಜಾಗೆ ಉಡುಗೊರೆಯಾಗಿ ಗೋಶಾಲೆಗೆ ಆರ್ಥಿಕ ನೆರವು ನೀಡಲು ಪ್ರಥಮ್ ತಂಡ ನಿರ್ಧರಿಸಿದೆಯಂತೆ. ಈ ವಿಚಾರವನ್ನು ಸ್ವತಃ ಪ್ರಥಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.