ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯಿಸಿರುವ ತೋತಾಪುರಿ ಸಿನಿಮಾದ ಹಾಡಿನ ಟೀಸರ್ ಒಂದನ್ನು ಮೊನ್ನೆಯಷ್ಟೇ ಬಿಡುಗಡೆ ಮಾಡಿತ್ತು. ಆದರೆ ಹಾಡಿನ ಟೀಸರ್ ನಲ್ಲಿ ಕೇಳಿ ಬಂದ ಸಾಲುಗಳಲ್ಲಿ ಕನ್ನಡ ಪದಗಳೇ ಮಂಗಮಾಯವಾಗಿತ್ತು. ಇದರಿಂದಾಗಿ ಚಿತ್ರತಂಡ ಟೀಕೆಗೊಳಗಾಗಿತ್ತು.
ಹೆಸರಿಗೆ ಕನ್ನಡ ಸಿನಿಮಾ. ಜಗ್ಗೇಶ್ ಕೂಡಾ ಕನ್ನಡ ಎಂದೇ ಮಾತನಾಡುತ್ತಿರುತ್ತಾರೆ. ಆದರೆ ಅವರ ಹಾಡಿನಲ್ಲಿ ಕನ್ನಡ ಪದಗಳಿಗಿಂತ ಹಿಂದಿ, ಉರ್ದು ಭಾಷೆಯೇ ಅತಿಯಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದರು. ಇದಕ್ಕೀಗ ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.
ಜನವರಿ 31 ಕ್ಕೆ ತೋತಾಪುರಿ ಸಿನಿಮಾದ ಹಾಡು ರಿಲೀಸ್ ಆಗಲಿದೆ. ಈ ಹಾಡಿನ ಒಂದು ತುಣುಕು ಹೊರಬಂದಾಗ ಎಲ್ಲರೂ ಯಾಕೆ ಕನ್ನಡ ಪದ ಬಳಸಿಲ್ಲ ಎಂದು ಕೇಳಿದ್ದರು. ಕನ್ನಡ ಸಿನಿಮಾ ರಂಗ ಬಂದು ಇಷ್ಟು ವರ್ಷವಾಗಿದೆ. ಇದುವರೆಗೆ ಹಾಡಿನಲ್ಲಿ ಇಂದ್ರ, ಚಂದ್ರ, ಹೂವು ಹಣ್ಣು ಎಂದೆಲ್ಲಾ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಆದರೆ ಈ ಹಾಡಿನಲ್ಲಿ ನಿರ್ದೇಶಕರು ವಿಭಿನ್ನವಾಗಿ ಹೇಳಿದ್ದಾರೆ. ಸೋಮವಾರ ಸಂಪೂರ್ಣ ಹಾಡು ಬರುತ್ತದೆ. ಹಾಡು ತುಂಬಾ ಚೆನ್ನಾಗಿದೆ. ಸಂಪೂರ್ಣವಾಗಿ ಕನ್ನಡದಲ್ಲಿದೆ. ಕೇಳಿದಾಗ ನಿಮಗೇ ಗೊತ್ತಾಗುತ್ತದೆ ಎಂದು ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.