Publish Date: Thu, 17 Dec 2020 (10:21 IST)
Updated Date: Thu, 17 Dec 2020 (10:22 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಜನ್ಮದಿನದ ಸಂಭ್ರಮ. ಅವರಿಗೆ ಶುಭ ಕೋರಿರುವ ನವರಸನಾಯಕ ಜಗ್ಗೇಶ್ ಮುರಳಿ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಿದ್ದಾರೆ.
ನಾನು, ಪುನೀತ್ ನಂತೆ ಶ್ರೀಮುರಳಿ ಕೂಡಾ 17 ನೇ ತಾರೀಖಿಗೆ ಹುಟ್ಟಿದವ. 1 ಪ್ಲಸ್ 7 ಎಂದರೆ 8 ಕರಾಬು ಸಂಖ್ಯೆ. ನಾವು ಯಾರಿಗೂ ಅರ್ಥವಾಗಲ್ಲ ,ತಲೆಬಾಗಲ್ಲ, ಗೆಲ್ಲದೆ ಹಿಂದಿರುಗೋಲ್ಲ, ಅಹಂಕಾರ ಪಡಲ್ಲ, ಶ್ರದ್ಧೆ ಭಕ್ತಿ, ಸ್ವಾಭಿಮಾನ ತ್ಯಾಗವಿಲ್ಲ. ಗೌರವಿಸಿದರೆ ಪಾದಪೂಜೆ ತಪ್ಪಲ್ಲ. ಅಣಕಿಸಿ ಅವಮಾನಿಸಿದರೆ ತಿರುಗಿಯೂ ನೋಡಲ್ಲ. ಸೋಲು ಮಟ್ಟಿ ಬೇಕಾದ್ದು ಪಡೆಯೋದು ನಿಲ್ಲಲ್ಲ. ಹುಟ್ಟು ಹಬ್ಬದ ಶುಭಾಶಯಗಳು ಎಂದು ನವರಸನಾಯಕ ಜಗ್ಗೇಶ್ ವಿಶ್ ಮಾಡಿದ್ದಾರೆ.