Select Your Language

Notifications

webdunia
webdunia
webdunia
webdunia

ಶ್ರೀಮುರಳಿ ಮದಗಜ ಮತ್ತೊಂದು ಉಗ್ರಂ!

ಶ್ರೀಮುರಳಿ ಮದಗಜ ಮತ್ತೊಂದು ಉಗ್ರಂ!
ಬೆಂಗಳೂರು , ಗುರುವಾರ, 17 ಡಿಸೆಂಬರ್ 2020 (09:37 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾದ ಫಸ್ಟ್ ಲುಕ್ ಟೀಸರ್ ಇಂದು ಲಾಂಚ್ ಆಗಿದ್ದು, ಶ್ರೀಮುರಳಿಯ ಹಿಂದಿನ ‘ಉಗ್ರಂ’ ಸಿನಿಮಾ ನೆನಪಿಸುವಂತಿದೆ.


ಶ್ರೀಮುರಳಿ ‘ಉಗ್ರಂ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಪ್ರಶಾಂತ್ ನೀಲ್ ಟೀಸರ್ ಲಾಂಚ್ ಮಾಡಿದ್ದಾರೆ. ಉಮಾಪತಿ ಗೌಡ ನಿರ್ಮಾಣದ ‘ಮದಗಜ’ ಸಿನಿಮಾದಲ್ಲಿ ಶ್ರೀಮುರಳಿ ಜತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇಂದು ಶ್ರೀಮುರಳಿ ಜನ್ಮದಿನವಾಗಿದ್ದು, ಈ ಟೀಸರ್ ನೋಡಿದ ಮೇಲೆ ಅವರ ಅಭಿಮಾನಿಗಳ ಸಂತಸ ಹೆಚ್ಚಾಗುವುದು ಖಂಡಿತಾ. ಪಕ್ಕಾ ಆಕ್ಷನ್ ಪ್ಯಾಕ್ಡ್ ಸಿನಿಮಾ ಎಂದು ಟೀಸರ್ ನೋಡಿದರೇ ಹೇಳಬಹುದು. ಮುಂದಿನ ವರ್ಷ ತೆರೆ ಕಾಣಲಿರುವ ಭರ್ಜರಿ ಸಿನಿಮಾಗಳ ಲಿಸ್ಟ್ ನಲ್ಲಿ ಈ ಸಿನಿಮಾವೂ ಸೇರಿಕೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ನಟ ಕಾರ್ತಿಯನ್ನು ನೋಡಿ ಆಘಾತಗೊಂಡ ಅಭಿಮಾನಿಗಳು