Publish Date: Wed, 16 Dec 2020 (10:02 IST)
Updated Date: Wed, 16 Dec 2020 (10:04 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರೀಕರಣದಿಂದ ಬಿಡುವಿದ್ದಾಗ ತಮ್ಮ ಸ್ನೇಹಿತರ ಜೊತೆ ಕಾಲ ಕಳೆಯುತ್ತಾರೆ. ಇದೀಗ ತಮ್ಮ ಸ್ನೇಹಿತ, ನಟ ಚಿಕ್ಕಣ್ಣ ಫಾರ್ಮ್ ಹೌಸ್ ನಲ್ಲಿ ದರ್ಶನ್ ತಮ್ಮ ಸಂಗಡಿಗರೊಂದಿಗೆ ಜಾಲಿ ಮೂಡ್ ನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾಸ್ಯ ನಟ ಚಿಕ್ಕಣ್ಣರ ಫಾರ್ಮ್ ಹೌಸ್ ಗೆ ಭೇಟಿ ನೀಡಿದ ದರ್ಶನ್ ಅಲ್ಲಿ ಸಾಕು ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಫಾರ್ಮ್ ಹೌಸ್ ಒಳಗೇ ಬೈಕ್ ರೈಡ್ ಮಾಡಿಕೊಂಡು ಕೆಲವು ಕಾಲ ಜಾಲಿಯಾಗಿ ಕಳೆದಿದ್ದಾರೆ. ಇತ್ತೀಚೆಗೆ ಚಿಕ್ಕಣ್ಣ ದರ್ಶನ್ ಸ್ನೇಹಿತರ ಜೊತೆ ಅವರ ಫಾರ್ಮ್ ಹೌಸ್ ನಲ್ಲಿ ಕ್ರಿಕೆಟ್ ಆಡಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ದರ್ಶನ್ ಸರದಿ.