Select Your Language

Notifications

webdunia
webdunia
webdunia
webdunia

ಮತ್ತೊಂದು ಸಿನಿಮಾ ಘೋಷಿಸಲಿರುವ ಹೊಂಬಾಳೆ ಫಿಲಂಸ್

ಮತ್ತೊಂದು ಸಿನಿಮಾ ಘೋಷಿಸಲಿರುವ ಹೊಂಬಾಳೆ ಫಿಲಂಸ್
ಬೆಂಗಳೂರು , ಮಂಗಳವಾರ, 15 ಡಿಸೆಂಬರ್ 2020 (12:01 IST)
ಬೆಂಗಳೂರು: ಕೆಜಿಎಫ್, ಯುವರತ್ನ ಮುಂತಾದ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದೆ.


ಡಿಸೆಂಬರ್ 17 ರಂದು ಮಧ್ಯಾಹ್ನ 11.59 ತನ್ನ ನಿರ್ಮಾಣ ಸಂಸ್ಥೆಯ 8 ನೇ ಸಿನಿಮಾವನ್ನು ಘೋಷಣೆ ಮಾಡುತ್ತಿರುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದಾರೆ. ಮೊನ್ನೆಯಷ್ಟೇ ಹೊಂಬಾಳೆ ಫಿಲಂಸ್ ಪ್ರಭಾಸ್ ನಾಯಕರಾಗಿರುವ ‘ಸಲಾರ್’ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾವೊಂದನ್ನು ಘೋಷಣೆ ಮಾಡಿತ್ತು. ಈಗ ಇನ್ಯಾವ ಬಿಗ್ ಪ್ರಾಜೆಕ್ಟ್ ಅನೌನ್ಸ್ ಆಗಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜಕುಮಾರ್ ಖೈದಿ ಲುಕ್ ಫುಲ್ ವೈರಲ್