Publish Date: Tue, 15 Dec 2020 (09:34 IST)
Updated Date: Tue, 15 Dec 2020 (09:36 IST)
ಬೆಂಗಳೂರು: ಪತಿ ಚಿರು ಸರ್ಜಾ ಅಗಲುವಿಕೆಯ ಬಳಿಕ ಪುತ್ರನ ಆಗಮನದ ಸಮಾಧಾನದಲ್ಲಿರುವ ನಟಿ ಮೇಘನಾ ರಾಜ್ ಈಗ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ.
ಮಗನ ವಿಚಾರದಲ್ಲಿ ಮೇಘನಾ ಪ್ರತಿಜ್ಞೆ ಮಾಡಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನಿಮ್ಮ ಮಗಳು ಸುರಕ್ಷಿತವಾಗಿರುವಂತೆ, ನಾನು ಮಗನನ್ನು ಬೆಳೆಸುತ್ತೇನೆ. ಇದು ನನ್ನ ಪ್ರತಿಜ್ಞೆ ಎಂದು ಮೇಘನಾ ಬರೆದುಕೊಂಡಿದ್ದಾರೆ. ಈ ಮೂಲಕ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ.