Publish Date: Tue, 15 Dec 2020 (10:15 IST)
Updated Date: Tue, 15 Dec 2020 (10:17 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ರಿಯಲ್ ಜೋಡಿ ದಿಗಂತ್ ಮಂಚಾಲೆ-ಐಂದ್ರಿತಾ ರೇ ಜೋಡಿ ಈಗ ಮಸ್ತಿ ಮೂಡ್ ನಲ್ಲಿದ್ದಾರೆ. ಮಂಗಳೂರಿನ ನದಿ ಕಿನಾರೆಯಲ್ಲಿ ಈ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ರೊಮ್ಯಾಂಟಿಕ್ ಆಗಿ ಕಳೆಯುತ್ತಿದ್ದಾರೆ.
ದಿಗಂತ್-ಐಂದ್ರಿತಾ ಮಂಗಳೂರಿನ ನದಿ ಕಿನಾರೆಯಲ್ಲಿ ಸರ್ಫಿಂಗ್ ಮಾಡುತ್ತಾ ನದಿ ಮಧ್ಯದಲ್ಲಿ ವರ್ಕೌಟ್ ಮಾಡುತ್ತಿರುವುದು ಮತ್ತು ಡೈವ್ ಹೊಡೆದು ನದಿಯಲ್ಲಿ ಈಜುವ ಮೋಜಿನ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸದ್ಯಕ್ಕೆ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿರುವ ಜೋಡಿ ರೊಮ್ಯಾಂಟಿಕ್ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ.