Publish Date: Thu, 17 Dec 2020 (09:05 IST)
Updated Date: Thu, 17 Dec 2020 (09:06 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ಸುದೀಪ್ ಅವರ ಗೇಟ್ ಮ್ಯಾನ್ ಬಗ್ಗೆ ದೂರಿದ್ದಾನೆ. ಇದಕ್ಕೆ ಕಿಚ್ಚನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ನಿಮ್ಮ ಮನರಂಜನೆಗೆ ಏನೂ ಕಡಿಮೆಯಿಲ್ಲ ಸರ್. ಆದ್ರೆ ನಿಮ್ಮ ಗೇಟ್ ಮ್ಯಾನ್ ಚೆನ್ನಾಗಿ ಸುಳ್ಳು ಹೇಳ್ತಾರೆ. ಬರ್ತ್ ಡೇ ದಿನ ನೀವು ಒಳಗಿದ್ರೂ ಇಲ್ಲ ಅಂತ ಸುಳ್ಳು ಹೇಳಿ ವಾಪಸ್ ಕಳುಹಿಸಿದ್ರು ಎಂದು ಅಭಿಮಾನಿಯೊಬ್ಬರು ಆಕ್ಷೇಪಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿರುವ ಸುದೀಪ್ ಸರ್.. ಅವನನ್ನು ಕ್ಷಮಿಸಿ ಬಿಡಿ. ಅವನು ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾನೆ ಎಂದು ಉತ್ತರಿಸಿದ್ದಾರೆ.