Select Your Language

Notifications

webdunia
webdunia
webdunia
webdunia

ಈ ಕಾರಣದಿಂದ ರದ್ದಾಗುತ್ತಾ ಇಂಡಿಯನ್ 2 ಚಿತ್ರ!

webdunia
ಚೆನ್ನೈ , ಗುರುವಾರ, 29 ಏಪ್ರಿಲ್ 2021 (11:19 IST)
ಚೆನ್ನೈ : ‘ಇಂಡಿಯನ್ 2’ ಚಿತ್ರ ನಿರ್ಮಾಪಕ ಲೈಕಾ ಪ್ರೊಡಕ್ಷನ್ ಮತ್ತು ನಿರ್ದೇಶಕ ಶಂಕರ್ ನಡುವಿನ ಘರ್ಷಣೆ ಎಲ್ಲರಿಗೂ ತಿಳಿದೆ ಇದೆ. ಇತ್ತೀಚೆಗೆ ಈ ಚಿತ್ರದ ಶೂಟಿಂಗ್ ಗೆ ಸಂಬಂಧಿಸಿದಂತೆ ಇವರಿಬ್ಬರ ನಡುವಿನ ಮಾತುಕತೆ ವಿಫಲವಾಗಿದೆ.

ನಿರ್ಮಾಪಕ ಲೈಕಾ ಪ್ರೊಡಕ್ಷನ್ ಮತ್ತು ನಿರ್ದೇಶಕ ಶಂಕರ್ ನಡುವಿನ ಘರ್ಷಣೆ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದ ಹಿನ್ನಲೆಯಲ್ಲಿ ಶಂಕರ್ ಅವರು ಇಂಡಿಯನ್ 2 ಚಿತ್ರದ ಚಿತ್ರೀಕರಣ ಮತ್ತೆ ಶುರುಮಾಡುವುದಾಗಿ ತಿಳಿಸಿದ್ದಾರೆ. ಜೂನ್ ಮತ್ತು ಅಕ್ಟೋಬರ್ ನಡುವೆ ಚಿತ್ರದ ಕೆಲಸಗಳನ್ನು ಮುಗಿಸುವ ಭರವಸೆ ನೀಡಿದ್ದರು.

ಆದರೆ ನಿರ್ಮಾಪಕರು ಮಾತ್ರ ಜೂನ್ ವೇಳೆಗೆ ಕೆಲಸ ಮುಗಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿದ್ದು, ಮಾತುಕತೆ ವಿಫಲವಾಗಿದೆ. ಹೀಗಾಗಿ ಈ ಚಿತ್ರ ರದ್ದುಗೊಳ್ಳುವ ಸಂಭವವಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗ ಅಶ್ವಿನ್ –ಪ್ರಭಾಸ್ ಬಹು ಬಜೆಟ್ ಚಿತ್ರದ ಚಿತ್ರೀಕರಣ ಮುಂದೂಡಿಕೆ