Select Your Language

Notifications

webdunia
webdunia
webdunia
webdunia

ಐಪಿಎಲ್ 14: ಗೆಲುವಿನ ಉತ್ಸಾಹದಲ್ಲಿರುವ ಚೆನ್ನೈಗೆ ಹೈದರಾಬಾದ್ ಎದುರಾಳಿ

ಐಪಿಎಲ್ 14: ಗೆಲುವಿನ ಉತ್ಸಾಹದಲ್ಲಿರುವ ಚೆನ್ನೈಗೆ ಹೈದರಾಬಾದ್ ಎದುರಾಳಿ
ನವದೆಹಲಿ , ಬುಧವಾರ, 28 ಏಪ್ರಿಲ್ 2021 (09:44 IST)
ನವದೆಹಲಿ: ಸತತ ಗೆಲುವಿನಿಂದ ಗೆದ್ದು ಬೀಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಇಂದು ಸನ್ ರೈಸರ್ಸ್ ಹೈದರಾಬಾದ್ ಎದುರಾಳಿಯಾಗಿದೆ.


ಇಂದಿನ ಪಂದ್ಯದಲ್ಲಿ ಮೇಲ್ನೋಟಕ್ಕೆ ಚೆನ್ನೈ ಫೇವರಿಟ್ ತಂಡ ಎನಿಸುತ್ತದೆ. ಸತತ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಈಗ ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ಸೋಲಿಸಿ ನಾಕೌಟ್ ಹಂತಕ್ಕೆ ತನ್ನ ಅವಕಾಶ ಮತ್ತಷ್ಟು ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಅತ್ತ ಹೈದರಾಬಾದ್ ಗೆ ಇನ್ ಫಾರ್ಮ್ ಆಲ್ ರೌಂಡರ್ ರವೀಂದ್ರ ಜಡೇಜಾದ್ದೇ ಚಿಂತೆ. ಹೈದರಾಬಾದ್ ಗೆ ಇದುವರೆಗೆ ಕೇವಲ ಒಂದೇ ಗೆಲುವು ದಕ್ಕಿರುವುದು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಕೈ ಕೊಟ್ಟಿರುವುದು ಆ ತಂಡಕ್ಕೆ ದೊಡ್ಡ ಚಿಂತೆಯಾಗಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ರೋಚಕ ಜಯದೊಂದಿಗೆ ಅಗ್ರ ಪಟ್ಟಕ್ಕೆ ಮರಳಿದ ಆರ್ ಸಿಬಿ