Select Your Language

Notifications

webdunia
webdunia
webdunia
webdunia

ಐಪಿಎಲ್ 14: ಆರ್ ಸಿಬಿಗೆ ಇಂದು ಡೆಲ್ಲಿ ಸವಾಲು

ಐಪಿಎಲ್ 14: ಆರ್ ಸಿಬಿಗೆ ಇಂದು ಡೆಲ್ಲಿ ಸವಾಲು
ಮುಂಬೈ , ಮಂಗಳವಾರ, 27 ಏಪ್ರಿಲ್ 2021 (09:38 IST)
ಮುಂಬೈ: ಐಪಿಎಲ್ 14 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.


ಸತತ ಗೆಲುವಿನ ಬಳಿಕ ಕಳೆದ ಪಂದ್ಯದಲ್ಲಿ ಅನಿರೀಕ್ಷಿತ ಬ್ಯಾಟಿಂಗ್ ಕುಸಿತದಿಂದಾಗಿ ಸೋಲನುಭವಿಸಿದ್ದ ಆರ್ ಸಿಬಿಗೆ ಈಗ ಮತ್ತೆ ಗೆಲುವಿನ ಹಳಿಗೆ ಮರಳುವ ಅನಿವಾರ್ಯತೆಯಿದೆ. ಕಳೆದ ಪಂದ್ಯದಲ್ಲಿ ಎಬಿಡಿ ಮತ್ತು ಕೊಹ್ಲಿ ಇಬ್ಬರೂ ಏಕಕಾಲಕ್ಕೆ ಕೈಕೊಟ್ಟಿದ್ದು ದುಬಾರಿಯಾಯ್ತು. ಆದರೆ ಈ ಕ್ಲಾಸ್ ಬ್ಯಾಟ್ಸ್ ಮನ್ ಗಳು ಪದೇ ಪದೇ ವಿಫಲರಾಗೋದು ಅನುಮಾನ.

ಹೀಗಾಗಿ ಡೆಲ್ಲಿಗೆ ಆರ್ ಸಿಬಿಗೆ ಪ್ರಬಲ ಎದುರಾಳಿ. ಅತ್ತ ಡೆಲ್ಲಿ ಕೂಡಾ ಕಳೆದ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ. ಆರ್ ಸಿಬಿ ಘಟಾನುಘಟಿ ಬ್ಯಾಟ್ಸ್ ಮನ್ ಗಳಿಗೆ ಸೆಡ್ಡು ಹೊಡೆಯಲು ಡೆಲ್ಲಿ ತಂಡದಲ್ಲಿ ಶಿಖರ್ ಧವನ್ ಇದ್ದಾರೆ. ಅವರು ಸಿಡಿಯದೇ ಹೋದರೆ ರನ್ ಗಳಿಸುವುದು ಕಷ್ಟವಾಗಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಕಿಂಗ್ಸ್ ಪಂಜಾಬ್ ಆಘಾತ ಕೊಟ್ಟ ಕೆಕೆಆರ್