Select Your Language

Notifications

webdunia
webdunia
webdunia
webdunia

ಐಪಿಎಲ್ 14: ಕಿಂಗ್ಸ್ ಪಂಜಾಬ್ ಆಘಾತ ಕೊಟ್ಟ ಕೆಕೆಆರ್

ಐಪಿಎಲ್ 14: ಕಿಂಗ್ಸ್ ಪಂಜಾಬ್ ಆಘಾತ ಕೊಟ್ಟ ಕೆಕೆಆರ್
ಅಹಮ್ಮದಾಬಾದ್ , ಮಂಗಳವಾರ, 27 ಏಪ್ರಿಲ್ 2021 (09:24 IST)
ಅಹಮ್ಮದಾಬಾದ್: ಐಪಿಎಲ್ 14 ರ ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ 5 ವಿಕೆಟ್ ಗಳ ಗೆಲುವು ಸಂಪಾದಿಸಿದೆ.
 


ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಆರಂಭಿಕ ಕುಸಿತ ಕಂಡು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು. ಮಯಾಂಕ್ ಅಗರ್ವಾಲ್ 31 ರನ್ ಗಳಿಸಿದರು. ಕ್ರಿಸ್ ಜೋರ್ಡಾನ್ 18 ಎಸೆತಗಳಲ್ಲಿ 30 ರನ್ ಗಳಿಸಿದ್ದರಿಂದ ಪಂಜಾಬ್ ಗೌರವಯುತ ಮೊತ್ತ ಗಳಿಸಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ 16.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 126 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ನಾಯಕನ ಆಟವಾಡಿದ ಇಯಾನ್ ಮಾರ್ಗನ್ ಅಜೇಯ 47 ರನ್ ಗಳಿಸಿದರು. ರಾಹುಲ್ ತ್ರಿಪಾಟಿ 41 ರನ್ ಗಳಿಸಿ ತಕ್ಕ ಸಾಥ್ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಯ ಇಬ್ಬರು ಆಟಗಾರರು ತವರಿಗೆ ವಾಪಸ್