Select Your Language

Notifications

webdunia
webdunia
webdunia
webdunia

ಐಪಿಎಲ್ 14: ಪಂಜಾಬ್ ಗೆ ಇಂದು ಕೋಲ್ಕೊತ್ತಾ ಎದುರಾಳಿ

ಐಪಿಎಲ್ 14: ಪಂಜಾಬ್ ಗೆ ಇಂದು ಕೋಲ್ಕೊತ್ತಾ ಎದುರಾಳಿ
ಅಹಮ್ಮದಾಬಾದ್ , ಸೋಮವಾರ, 26 ಏಪ್ರಿಲ್ 2021 (09:19 IST)
ಅಹಮ್ಮದಾಬಾದ್: ಐಪಿಎಲ್ 14 ರಲ್ಲಿ ಇಂದು ಕಿಂಗ್ಸ್ ಪಂಜಾಬ್, ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ.


ಕೋಲ್ಕೊತ್ತಾಗೆ ಸತತ ಸೋಲುಗಳ ಸರಮಾಲೆ ಎದುರಾಗಿದೆ. ಇದುವರೆಗಾಗಿ ಕೇವಲ ಒಂದು ಗೆಲುವು ಸಂಪಾದಿಸಿರುವ ಕೆಕೆಆರ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಯಾಕೋ ಈ ಆವೃತ್ತಿಯಲ್ಲಿ ಕೆಕೆಆರ್ ಗೆ ಬ್ಯಾಟಿಂಗ್, ಬೌಲಿಂಗ್ ವೈಫಲ್ಯವೇ ಕಾಡುತ್ತಿದೆ.

ಆದರೆ ಇತ್ತ ಪಂಜಾಬ್ ಆರಂಭದಲ್ಲಿ ಸೋಲು ಕಂಡಿದ್ದರೂ ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿದೆ. ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಪಂಜಾಬ್ ಗೆ ಕೆಕೆಆರ್ ವಿರುದ್ಧ ಮೇಲುಗೈ ಸಾಧಿಸುವ ಆತ್ಮವಿಶ್ವಾಸವಿದೆ. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಸೂಪರ್ ಓವರ್ ನಲ್ಲಿ ಗೆದ್ದ ಡೆಲ್ಲಿ