ಚೆನ್ನೈ: ಸಿನಿಮಾ ಲೋಕದಿಂದ ದೂರವಿರುವ ನಟಿ ಸಮೀರಾ ರೆಡ್ಡಿ ಅವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಸೌಂದರ್ಯವನ್ನು ಮರೆಮಾಚದೆ ನ್ಯಾಚುರಲ್ ಆಗಿ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾಗುತ್ತಾರೆ. ಇಂತಹ ನಟಿಗೆ ಕೆಲವು ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.
ಹೌದು. ನಟಿ ಸಮೀರಾ ರೆಡ್ಡಿ ಅವರಿಗೆ 42 ವರ್ಷ ವಯಸ್ಸಾಗಿದೆ. ಅವರ ಮುಖ ಸುಕ್ಕುಗಟ್ಟಿ, ಕೂದಲು ಬೆಳ್ಳಗಾಗಿದೆ. ಆದರೆ ಅವರು ಬೇರೆ ನಟಿಯರ ಹಾಗೆ ತಮ್ಮ ಸೌಂದರ್ಯವನ್ನು ಮರೆಮಾಚುತ್ತಿಲ್ಲ. ಆದರೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ.
ಇದರಿಂದ ಕೋಪಗೊಂಡ ನಟಿ ಅವರ ವರ್ತನೆಗೆ ಯಾವುದೇ ಮಾತುಗಳನ್ನಾಡದೆ ಯಶ್ ರಾಜ್ ಅವರ ಒಂದು ಲೆಟೆಸ್ಟ್ ಹಾಡನ್ನು ಬಳಸಿಕೊಂಡು ನೆಟ್ಟಿಗರಿಗೆ ಚಾಟಿ ಬೀಸಿದ್ದಾರೆ. ಇದು ನನ್ನ ಜೀವನ ನಾನು ಹೇಗಾದರೂ ಇರುತ್ತೇನೆ, ನಿಮ್ಮದು ನೀವು ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.