ನಾನು ಜನತೆ ಯಾವ ರೀತಿ ಯೋಚಿಸುತ್ತಾರೆ ಎನ್ನುವ ಬಗ್ಗೆ ನಾನು ಕೇರ್ ಮಾಡೋಲ್ಲ. ನನ್ನ ಮತ್ತು ಅಮಿತಾಭ್ ಪ್ರೀತಿಯ ಬಗ್ಗೆ ಸಾರ್ವಜನಿಕರಿಗೆ ಯಾಕೆ ಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾಳೆ.ಹೌದು, ನಾನು ಆತನೂ ನನ್ನನ್ನು ಪ್ರೀತಿಸುತ್ತಾನೆ ಏನೀಗ? ಎಂದು ಬಾಲಿವುಡ್ ಚಿರಯವ್ವನೆ ರೇಖಾ ನುಲಿದಿದ್ದಾಳೆ.
ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ತಮ್ಮ ಸಾರ್ವಜನಿಕ ಜೀವನದಲ್ಲಿ ನನ್ನೊಂದಿಗೆ ಅಫೇರ್ ಇಲ್ಲ ಎಂದು ಹೇಳಿದ್ದಾರೆ.ಯಾಕೆಂದರೆ ತನ್ನ ಕುಟುಂಬದ ಗೌರವ, ಮಕ್ಕಳ ಗೌರವವನ್ನು ಕಾಪಾಡಲು ಆ ರೀತಿ ಹೇಳಿದ್ದಾರೆ. ಅದಕ್ಕೆ ಸ್ವಾಗತಿಸುತ್ತೇನೆ ಎಂದು ಹಿರಿಯ ನಟಿ ರೇಖಾ ಹೇಳಿದ್ದಾರೆ.
ನಾವಿಬ್ಬರು ಖಾಸಗಿಯಾಗಿದ್ದಾಗ ಅಮಿತಾಭ್ ನನ್ನನ್ನು ಪ್ರೀತಿಸುವುದಾಗಿ ಹೇಳಿದ್ದಾರೆ. ಬಾಲಿವುಡ್ ನಟರು ಹತ್ತಾರು ಮಂದಿಯೊಂದಿಗೆ ಅಫೇರ್ ಇಟ್ಟುಕೊಂಡಿರುತ್ತಾರೆ. ಜನತೆಗೆ ಯಾಕೆ ಕೇರ್ ಮಾಡಬೇಕು. ಅಮಿತಾಬ್ ಹಳೆಯ ಕಾಲದ ಗುಣವನ್ನು ಹೊಂದಿದ್ದಾರೆ. ಅವರು ಯಾರಿಗೂ ನೋವು ಮಾಡಲು ಬಯಸುವುದಿಲ್ಲ. ಆದ್ದರಿಂದ ಪತ್ನಿಗೂ ನೋವು ಮಾಡಬಾರದು ಎನ್ನುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಚಿರಯವ್ವನೆ ನಟಿ ರೇಖಾ ತಮ್ಮ ಜನ್ಮದಿನವನ್ನು ಅಚಿರಿಸಿಕೊಂಡ ಮರುದಿನವೇ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.