Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಮೊದಲ ಸಂಭಾವನೆ ಎಷ್ಟು ಗೊತ್ತಾ?

webdunia
ಮುಂಬೈ , ಬುಧವಾರ, 27 ಸೆಪ್ಟಂಬರ್ 2017 (15:20 IST)
ದೇಶದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸ್ಥಾನ ಪಡೆದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮೊದಲ ನಟನೆಗೆ ಎಷ್ಟು ಸಂಭಾವನೆ ಪಡೆದಿದ್ದಾರಾ ಗೊತ್ತಾ? ಕೇವಲ 75 ರೂ.ಮಾತ್ರವಂತೆ.
ಕಳೆದ ವರ್ಷ ಅತಿ ಹೆಚ್ಚು ಸಂಭಾವನೆ ಪಡೆದ ಬಾಲಿವುಡ್ ನಟರಲ್ಲಿ ಸಲ್ಮಾನ್ ಖಾನ್ ಎರಡನೇ ಸ್ಥಾನ ಪಡೆದಿದ್ದಾರೆ.
 
11ನೇ ಅವತರಣಿಕೆಯ ಬಿಗ್ ಬಾಸ್‌‌ ಶೋ ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್ ಒಂದು ಎಪಿಸೋಡ್‌ಗಾಗಿ 11 ಕೋಟಿ ರೂಪಾಯಿ ಸಂಭಾವನೆ ಪಡೆದ ಟಿವಿ ನಟರಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
 
51 ವರ್ಷ ವಯಸ್ಸಿನ ಸಲ್ಮಾನ್ ಖಾನ್, ತಮ್ಮ ಚಿತ್ರರಂಗದ ಆರಂಭದ ದಿನಗಳಲ್ಲಿ ಎಷ್ಟು ಹಣ ಪಡೆದಿದ್ದೇನೆ ಎನ್ನುವುದನ್ನು ಅವರೇ ಬಹಿರಂಗಪಡಿಸಿದ್ದಾರೆ.
 
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ನನ್ನ ಗೆಳೆಯನೊಬ್ಬ ತಾಜ್ ಹೋಟೆಲ್‌ನಲ್ಲಿ ನಡೆದ ನರ್ತನ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ಅವನು ನನ್ನನ್ನು ಶೋಗೆ ಕರೆದುಕೊಂಡು ಹೋಗಿದ್ದ. ತಾಜ್‌ಹೋಟೆಲ್‌ನಲ್ಲಿ ನಡೆದ ನರ್ತನ ಶೋ ಒಂದರಲ್ಲಿ ನಾನು ತಮಾಷೆಗಾಗಿ ಹಿಂದಿನ ಸಾಲಿನಲ್ಲಿ ಡಾನ್ಸ್ ಮಾಡಿದ್ದೆ. ಆವಾಗ ನನ್ನ ಮೊದಲ ಸಂಭಾವನೆ 75 ರೂ.ಗಳಾಗಿತ್ತು ಎಂದು ತಿಳಿಸಿದ್ದಾರೆ. 
 
"ನಂತರ ಕ್ಯಾಂಪಾ ಕೋಲಾ (ಮೃದು ಪಾನೀಯ ಬ್ರಾಂಡ್) ಗೆ ನನ್ನ ಸಂಭಾವನೆ ರೂ 750 ಕ್ಕೆ ಏರಿತು ಮತ್ತು ನಂತರ ಅದು ದೀರ್ಘಕಾಲದವರೆಗೆ 1,500 ರೂ.ಗಳಾಗಿದ್ದು, ನಂತರ ನಾನು ಮೈನೆ ಪ್ಯಾರ್ ಕಿಯಾ ಚಿತ್ರಕ್ಕೆ 31,000 ರೂ. ಸಂಭಾವನೆ ಪಡೆದಿದ್ದೆ. ನಂತರದ್ದು ಇತಿಹಾಸ ಎಂದು ಬಾಲಿವುಡ್ ಹಾಟ್ ನಟ ಸಲ್ಮಾನ್ ಖಾನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಕರ್ ಗೆ ಎಂಟ್ರಿ ಪಡೆಯಲು ವಿಫಲವಾದ ಬಾಹುಬಲಿ 2!