Publish Date: Wed, 09 Feb 2022 (09:28 IST)
Updated Date: Wed, 09 Feb 2022 (09:32 IST)
ಬೆಂಗಳೂರು: ಫೆಬ್ರವರಿ 11 ರಂದು ಬಿಡುಗಡೆಯಾಗುತ್ತಿರುವ ಲವ್ ಮಾಕ್ಟೇಲ್ 2 ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲವಿದೆ. ಈ ಚಿತ್ರದ ಪ್ರೀಮಿಯರ್ ಶೋ ಆಯೋಜನೆ ಮಾಡಿರುವ ಚಿತ್ರತಂಡ ಈಗ ಸಖತ್ ಖುಷಿಯಲ್ಲಿದೆ.
ಫೆಬ್ರವರಿ 10 ರಂದು ಮೈಸೂರಿನಲ್ಲಿ ಪ್ರೀಮಿಯರ್ ಶೋ ತೋರಿಸಲು ಚಿತ್ರತಂಡ ನಿರ್ಧರಿಸಿತ್ತು. ಅದರಂತೆ ಆನ್ ಲೈನ್ ನಲ್ಲಿ ಬುಕಿಂಗ್ ಮಾಡಲು ಹೇಳಿತ್ತು. ಅದಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ.
ಈ ಖುಷಿಯಲ್ಲಿರುವ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ತಂಡ ಈಗ ಶೋ ಟೈಮಿಂಗ್ಸ್ ಹೆಚ್ಚು ಮಾಡಿಸಿದ್ದಾರೆ. ಜೊತೆಗೆ ಶಿವಮೊಗ್ಗ, ಬೆಂಗಳೂರಲ್ಲೂ ಪ್ರೀಮಿಯರ್ ಶೋ ನಡೆಸಲು ಮುಂದಾಗಿದೆ. ಆದಿ-ನಿಧಿಯ ಯೂಥ್ ಫುಲ್ ಸ್ಟೋರಿ ಹೊಂದಿರುವ ಲವ್ ಮಾಕ್ಟೇಲ್ 1 ನೇ ಭಾಗ ಭರ್ಜರಿ ಹಿಟ್ ಆಗಿತ್ತು. ಅದೇ ಕುತೂಹಲದಲ್ಲಿ ಎರಡನೇ ಭಾಗದ ಬಗ್ಗೆ ಪ್ರೇಕ್ಷಕರು ಆಸಕ್ತಿ ತೋರಿಸುತ್ತಿದ್ದಾರೆ. ಚಿತ್ರಕ್ಕೆ ಬಿಡುಗಡೆಗೂ ಮೊದಲೇ ಸಿಗುತ್ತಿರುವ ರೆಸ್ಪಾನ್ಸ್ ಗೆ ಚಿತ್ರತಂಡ ಖುಷಿಯಾಗಿದೆ.