Publish Date: Tue, 08 Feb 2022 (11:18 IST)
Updated Date: Tue, 08 Feb 2022 (10:34 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇದೀಗ ಮತ್ತೆ ಸಿನಿಮಾಗಳ ರಿಲೀಸ್ ಸರಮಾಲೆ ಶುರುವಾಗಿದೆ. ಫೆಬ್ರವರಿಯಲ್ಲಂತೂ ಅನೇಕ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ. ಅವುಗಳು ಯಾವುವು ನೋಡೋಣ.
ಫೆಬ್ರವರಿ 11 ರಂದು ಈಗಾಗಲೇ ತಿಳಿದಿರುವಂತೆ ಹಲವು ಸಿನಿಮಾಗಳು ರಿಲೀಸ್ ಆಗಲಿವೆ. ಲವ್ ಮಾಕ್ಟೇಲ್ 2, ಫೋರ್ ವಾಲ್ಸ್, ರೌಡಿ ಬೇಬಿ ಸಿನಿಮಾಗಳು ಈ ದಿನ ರಿಲೀಸ್ ಆಗುತ್ತಿವೆ. ಇದಲ್ಲದೆ, ರೌದ್ರ, ಒಪ್ಪಂದ, ಪ್ರೀತಿಗಿಬ್ಬರು ಕೂಡಾ ಇದೇ ದಿನ ಬಿಡುಗಡೆಯಾಗುತ್ತಿದೆ.
ಫೆಬ್ರವರಿ 18 ರಂದು ವರದ, ಬಹುಕೃತ ವೇಷಂ, ಗಿಲ್ಕಿ ಸಿನಿಮಾ ರಿಲೀಸ್ ಆಗುತ್ತಿದೆ. ಫೆಬ್ರವರಿ 24 ರಂದು ಏಕ್ ಲವ್ ಯಾ, ಓಲ್ಡ್ ಮಾಂಕ್, ಮನಸಾಗಿದೆ ಸಿನಿಮಾ ರಿಲೀಸ್ ಆಗುತ್ತಿದೆ. ಈಗ ಅನೌನ್ಸ್ ಆಗಿರುವುದು ಇಷ್ಟು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳ ರಿಲೀಸ್ ಅನೌನ್ಸ್ ಆಗಬಹುದು.