Publish Date: Mon, 04 Jan 2021 (09:27 IST)
Updated Date: Mon, 04 Jan 2021 (09:29 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ದಿನ ಅಂದರೆ ಜನವರಿ 8 ರಂದು ಕೆಜಿಎಫ್ 2 ಟೀಸರ್ ಬಿಡುಗಡೆಯಾಗುತ್ತಿದೆ. ಈ ಟೀಸರ್ ಸಕ್ಸಸ್ ಆಗಲು ಏನು ಮಾಡಬೇಕೆಂದು ರಾಕಿ ಭಾಯ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸೂತ್ರ ಹೇಳಿಕೊಟ್ಟಿದ್ದಾರೆ!
ಕೆಜಿಎಫ್ 2 ಟೀಸರ್ ನ್ನು ಕೇವಲ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲೇ ನೋಡಿ. ಟೀಸರ್ ವೀಕ್ಷಣೆ ಪರಿಗಣನೆಗೆ ಬರಲು 30 ಸೆಕೆಂಡ್ ಗಿಂತ ಹೆಚ್ಚು ಹೊತ್ತು ವೀಕ್ಷಣೆ ಮಾಡಿ. ಮತ್ತೆ ನಿಮ್ಮ ನಿಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಟೀಸರ್ ಲೈಕ್, ಶೇರ್ ಮಾಡಿ ಹೆಚ್ಚು ಪ್ರಚಾರ ಸಿಗುವಂತೆ ನೋಡಿಕೊಳ್ಳಿ. ಹೀಗಂತ ಯಶ್ ಅಭಿಮಾನಿಗಳು ತಮ್ಮ ಬಾಸ್ ಸಿನಿಮಾದ ಟೀಸರ್ ಸಕ್ಸಸ್ ಮಾಡಲು ಈಗಲೇ ತಂತ್ರ ಹೆಣೆದಿದ್ದಾರೆ.