ಬೆಂಗಳೂರು: ಹಿರಿಯ ನಿರ್ದೇಶಕ ಎಸ್ ನಾರಾಯಣ್ ಬಹಳ ವರ್ಷಗಳ ನಂತರ ನಿರ್ದೇಶನ ಮಾಡುತ್ತಿರುವ ಸಿನಿಮಾ ಡಿ5 ಸೆಟ್ಟೇರಿದೆ. ಈ ಸಿನಿಮಾಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ನಾಯಕರಾಗಿದ್ದರೆ, ನಾಯಕಿಯಾಗಿ ಅದಿತಿ ಪ್ರಭುದೇವ ಆಯ್ಕೆಯಾಗಿದ್ದಾರೆ.
ಸಿನಿಮಾದ ಟೈಟಲ್ ನ್ನು ಡಿ ಬಾಸ್ ದರ್ಶನ್ ಲಾಂಚ್ ಮಾಡಿದ್ದಾರೆ. ನಟ ಆದಿತ್ಯಗೂ ಇದು ಒಂದು ರೀತಿಯ ಕಮ್ ಬ್ಯಾಕ್ ಸಿನಿಮಾ ಎನ್ನಬಹುದು. ಇದು ಆದಿತ್ಯನಿಗೂ ಹೊಸ ರೀತಿಯ ಪಾತ್ರವಾಗಿರಲಿದ್ದು, ಅದಿತಿ ಕೂಡಾ ಇದುವರೆಗೆ ಕಾಣಿಸಿಕೊಳ್ಳದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.