Publish Date: Wed, 15 Dec 2021 (09:05 IST)
Updated Date: Wed, 15 Dec 2021 (09:14 IST)
ಬೆಂಗಳೂರು: ಸಲಗ ಬಿಡುಗಡೆ ಬಳಿಕ ದುನಿಯಾ ವಿಜಯ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಎದ್ದಿರುವಾಗಲೇ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.
ಮೊದಲ ಬಾರಿಗೆ ನಿರ್ದೇಶಿಸಿದ್ದ ಸಲಗ ಹಿಟ್ ಆದ ಖುಷಿಯಲ್ಲಿರುವ ವಿಜಿ ಇದೀಗ ತೆಲುಗಿನ ನಟ ಬಾಲಕೃಷ್ಣ ಸಿನಿಮಾವೊಂದರಲ್ಲಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ.
ಸದ್ಯಕ್ಕೆ ಬಿಳಿ ಕಲರ್ ನ ಹೇರ್ ಸ್ಟೈಲ್ ಮೂಲಕ ವಿಜಿ ಮಿಂಚುತ್ತಿದ್ದು, ಈ ಹೊಸ ಲುಕ್ ತೆಲುಗು ಸಿನಿಮಾಗಾಗಿ ಎಂಬ ಮಾತು ಕೇಳಿಬರುತ್ತಿದೆ. ಇನ್ನೂ ಯಾವುದು ಪಕ್ಕಾ ಆಗಿಲ್ಲ. ಆದರೆ ಹೊಸ ಹೇರ್ ಸ್ಟೈಲ್ ನಲ್ಲಿ ವಿಜಿ ಮತ್ತಷ್ಟು ಖಡಕ್ ಆಗಿ ಕಾಣಿಸುತ್ತಿರುವುದಂತೂ ಸುಳ್ಳಲ್ಲ.