Publish Date: Tue, 14 Dec 2021 (17:26 IST)
Updated Date: Tue, 14 Dec 2021 (17:28 IST)
ಬೆಂಗಳೂರು: ಧಾರವಾಡದಿಂದ ಓಟದ ಮೂಲಕ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಲು ಬರುತ್ತಿದ್ದ ಮಹಿಳೆ ದ್ರಾಕ್ಷಾಯಿಣಿ ಕೊನೆಗೂ ಸಮಾಧಿ ತಲುಪಿದ್ದಾರೆ.
ಕಳೆದ 14 ದಿನಗಳಿಂದ ಓಟದ ಮೂಲಕವೇ ತನ್ನ ಮಕ್ಕಳ ಜೊತೆಗೆ ಸಮಾಧಿ ಬಳಿ ಬರುತ್ತಿದ್ದ ದ್ರಾಕ್ಷಾಯಿಣಿ ಇಂದು ಕೊನೆಗೂ ಬಂದು ತಲುಪಿದ್ದಾರೆ.
ಇನ್ನು, ಸಮಾಧಿ ಬಳಿ ಬಂದ ದ್ರಾಕ್ಷಾಯಣಿಯನ್ನು ಸ್ವತಃ ಯುವರಾಜ್ ಕುಮಾರ್ ಸ್ವಾಗತಿಸಿದ್ದಾರೆ. ಈ ವೇಳೆ ಅಪ್ಪು ಅಭಿಮಾನಿಗಳು ಆಕೆಯ ಸಾಧನೆಗೆ ಸನ್ಮಾನಿಸಿದ್ದಾರೆ. ಕೇವಲ ಓಟ ಮಾತ್ರವಲ್ಲದೆ, ತನ್ನ ಜೊತೆಗೆ ಬರುತ್ತಿದ್ದ ವಾಹನದಲ್ಲಿ ನೇತ್ರದಾನದ ಫಲಕವಿಟ್ಟು ಪುನೀತ್ ರಂತೇ ನೇತ್ರದಾನ ಮಾಡುವಂತೆ ಜಾಗೃತಿ ಮೂಡಿಸಿದ್ದರು. ಆಕೆಯ ಸಾಧನೆಯನ್ನು ಗುರುತಿಸಿ ಸ್ವತಃ ರಾಘವೇಂದ್ರ ರಾಜ್ ಕುಮಾರ್ ಬೆಂಗಳೂರಿಗೆ ಬಂದ ಮೇಲೆ ಭೇಟಿ ಮಾಡುವುದಾಗಿ ಹೇಳಿದ್ದರು.