Select Your Language

Notifications

webdunia
webdunia
webdunia
webdunia

ತಾಯಿಗೆ ಸಮಾಧಿ ಕಟ್ಟಿಸಿದ ದುನಿಯಾ ವಿಜಿ

ತಾಯಿಗೆ ಸಮಾಧಿ ಕಟ್ಟಿಸಿದ ದುನಿಯಾ ವಿಜಿ
ಬೆಂಗಳೂರು , ಗುರುವಾರ, 15 ಜುಲೈ 2021 (09:05 IST)
ಬೆಂಗಳೂರು: ನಟ ದುನಿಯಾ ವಿಜಿ ಮೊನ್ನೆಯಷ್ಟೇ ಅಗಲಿದ ತಮ್ಮ ತಾಯಿಗೆ ಗೌರವಾರ್ಥವಾಗಿ ಸಮಾಧಿ ಕಟ್ಟಿಸಿದ್ದಾರೆ.


ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ದುನಿಯಾ ವಿಜಿ ಅವರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದಾರೆ. ಈ ದುಃಖದ ನಡುವೆಯೂ ತಾವೇ ಖುದ್ದಾಗಿ ಎದುರು ನಿಂತು ತಾಯಿಯ ಸಮಾಧಿ ಕಟ್ಟಿಸಿದ್ದಾರೆ.

ಬ್ರೈನ್ ಸ್ಟ್ರೋಕ್ ನಿಂದಾಗಿ ವಿಜಿ ತಾಯಿ ನಾರಾಯಣಮ್ಮ ಕಳೆದ ವಾರ ಇಹಲೋಕ ತ್ಯಜಿಸಿದ್ದರು. ಇದೀಗ ಒಂದೇ ವಾರದಲ್ಲಿ ತಾಯಿಗೆ ಸಮಾಧಿ ಕಟ್ಟಿಸಿ ವಿಜಿ ತಮ್ಮ ಕರ್ತವ್ಯ ನೆರವೇರಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ಬಳಿಕ ಮತ್ತೆ ಹುಟ್ಟಿ ಬಾ ಅಮ್ಮ ಎಂದು ವಿಜಿ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಬರೆದುಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಂಚನೆ ಪ್ರಕರಣ: ದೇವರ ಮೊರೆ ಹೋದ ನಿರ್ಮಾಪಕ ಉಮಾಪತಿ ಗೌಡ