Publish Date: Wed, 14 Jul 2021 (09:10 IST)
Updated Date: Wed, 14 Jul 2021 (09:20 IST)
ಬೆಂಗಳೂರು: ಕನ್ನಡದ ಹಿರಿಯ ನಟ ಅನಂತ್ ನಾಗ್ ಗೆ ಭಾರತದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ನೀಡಬೇಕೆಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಆರಂಭಿಸಿದ ಅಭಿಯಾನಕ್ಕೆ ಭಾರೀ ಬೆಂಬಲ ಸಿಕ್ಕಿದೆ.
ಹಿರಿಯ ನಟನಿಗೆ ಪದ್ಮಪ್ರಶಸ್ತಿ ನೀಡಬೇಕೆಂಬ ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಕೈ ಜೋಡಿಸೋಣ ಎಂದು ರಿಷಬ್ ಆನ್ ಲೈನ್ ಅಭಿಯಾನಕ್ಕೆ ಕರೆ ನೀಡಿದ್ದರು.
ಇದಕ್ಕೀಗ ಜನಸಾಮಾನ್ಯರಿಂದ ಹಿಡಿದು ಗಣ್ಯರವರೆಗೆ ಭಾರೀ ಬೆಂಬಲ ಸಿಕ್ಕಿದೆ. ಸಂಸದ ಪ್ರತಾಪ್ ಸಿಂಹ, ಅನಂತ್ ನಾಗ್ ಗೆ ಪದ್ಮ ಪ್ರಶಸ್ತಿ ಕೊಡುವುದು ಪದ್ಮ ಪುರಸ್ಕಾರಕ್ಕೇ ಗೌರವ ಎಂದಿದ್ದಾರೆ. ಇವರಲ್ಲದೆ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಅನೇಕ ಅಭಿಮಾನಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಈ ಸಾಲಿನ ಪದ್ಮ ಪ್ರಶಸ್ತಿಗೆ ನಿಮ್ಮೂರಿನ ಸಾಧಕರನ್ನು ನಾಮನಿರ್ದೇಶನ ಮಾಡಲು ಸರ್ಕಾರ ಸೆಪ್ಟೆಂಬರ್ 15 ರವರೆಗೆ ಸಮಯ ನೀಡಿದೆ.