Select Your Language

Notifications

webdunia
webdunia
webdunia
webdunia

' ನಟ ಅನಂತ್ ನಾಗ್ಗೆ ಪದ್ಮ ಪುರಸ್ಕಾರ'

' ನಟ ಅನಂತ್ ನಾಗ್ಗೆ  ಪದ್ಮ ಪುರಸ್ಕಾರ'
Bangalore , ಬುಧವಾರ, 14 ಜುಲೈ 2021 (08:16 IST)
ಬೆಂಗಳೂರು( ಜು. 14) :  ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ಸಾರ್ವಜನಿಕರೇ ತಮ್ಮ ನಡುವೆ ಸಾಧಕರ ಹೆಸರುಗಳನ್ನು ಶಿಫಾರಸು ಮಾಡಬಹುದು ಎಂದು ಹೇಳಿದ್ದರು  ಇದಾದ ಮೇಲೆ ಸಹಜವಾಗಿಯೇ ಹೆಸರುಗಳು ಬರತೊಡಗಿವೆ.

ಕನ್ನಡದ ಹಿರಿಯ ನಟ, ಕಲಾವಿದ  ಅನಂತ್ ನಾಗ್ ಅವರಿಗೆ ಪದ್ಮ ಪುರಸ್ಕಾರ ಪ್ರದಾನ ಮಾಡಬೇಕು ಎಂಬ ಒತ್ತಾಯ  ಕೇಳಿಬಂದಿದೆ.  ಟ್ವಿಟರ್ ನಲ್ಲಿ #
ForPadma ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.

* ಹಿರಿಯ ನಟ ಅನಂತ್ ನಾಗ್  ಅವರಿಗೆ ಪದ್ಮ ಪುರಸ್ಕಾರ
* ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ
* ಸ್ಯಾಂಡಲ್ವುಡ್ ಕಲಾವಿದರಿಂದ ಬೆಂಬಲ
 ಈ ಕುರಿತು ಟ್ವಿಟರ್ನಲ್ಲಿ  ಎಂಬ ಹ್ಯಾಷ್ಟ್ಯಾಗ್ ಮೂಲಕ ಅಭಿಯಾನವನ್ನೇ ಕೈಗೊಳ್ಳಲಾಗಿದೆ. ನಿರ್ದೇಶಕ ರಿಷಬ್ ಶೆಟ್ಟಿ ಅವರು, 'ಚಿತ್ರರಸಿಕರ ಮನಗೆಲ್ಲುತ್ತಾ ಬಂದಿರುವ ಈ ಅಭಿನಯ ಬ್ರಹ್ಮ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿಯೊಂದು ಸಲ್ಲಬೇಕಾದದ್ದು ನ್ಯಾಯವೇ ಸರಿ ಎಂದು ಹೇಳಿದ್ದಾರೆ.
ಅನಂತ್ ನಾಗ್ ರಾಜಕಾರಣದ ಹೆಜ್ಜೆ ಗುರುತು, ಸಚಿವರಾಗಿಯೂ ಕೆಲಸ ಮಾಡಿದ್ದರು
ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಹಿರಿಯ ನಟ, ಶ್ರೀಯುತ ಅನಂತನಾಗ್ ಕೂಡ ಅಂತಹ ಮಹಾನ್ ಪ್ರತಿಭೆಗಳಲ್ಲಿ ಒಬ್ಬರು ಒಬ್ಬ ಚಿತ್ರನಟರಾಗಿ, ಕನ್ನಡ ಭಾಷೆಗೆ, ನಾಡಿಗೆ, ಚಿತ್ರರಂಗಕ್ಕೆ ಇವರು ನೀಡಿರುವ, ನೀಡುತ್ತಲಿರುವ ಕೊಡುಗೆ ಚಿರಸ್ಮರಣೀಯ, ಎಂತಹ ಪಾತ್ರಗಳು, ಆಗಲಿ, ಲೀಲಾಜಾಲವಾಗಿ ಅಭಿನಯಿಸಿ, ಚಿತ್ರರಸಿಕರ ಮನಗೆಲ್ಲುತ್ತಾ ಬಂದಿರುವ ಈ ಅಭಿನಯ ಬ್ರಹ್ಮನಿಗೆ ಪದ್ಮ ಪುರಸ್ಕಾರ ದೊರೆಯಬೇಕು ಎಂದು ಶೆಟ್ಟಿ ಹೇಳಿದ್ದಾರೆ.
ನಾವೆಲ್ಲರೂ ಒಂದುಗೂಡಿ, ನಮ್ಮ ನಾಡಿನ ಪರವಾಗಿ ಅನಂತ್ ನಾಗ್ ಅವರನ್ನು #PeoplesPadma ಗೆ ನಾಮನಿರ್ದೇಶಿಸೋಣ. ಇದಕ್ಕೆ ಸೆಪ್ಟೆಂಬರ್ 15ರ ವರೆಗೂ ಸಮಯವಿದ್ದು, ಅಲ್ಲಿಯವರೆಗೂ #AnanthnagForPadma ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ಎಲ್ಲರೂ ಇದಕ್ಕೆ ಬೆಂಬಲ ಸೂಚಿಸೋಣ ಎಂದು ಕೋರಿಕೊಂಡಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಅವರು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, 'ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮ ಪ್ರಶಸ್ತಿ ಕನ್ನಡಿಗರ ಆಶಯ ಎಂದಿದ್ದಾರೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮೇರು ಕಲಾವಿದನ ಸಾಧನೆಗಳನ್ನು ಹಂಚಿಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳಗೆ ಹೋಲಿಸಿದರೆ ನಮ್ಮಲ್ಲಿ ಕೊರೊನಾ ಕೇಸ್ ಕಡಿಮೆ: ಸಚಿವ ಸುಧಾಕರ್