Select Your Language

Notifications

webdunia
webdunia
webdunia
webdunia

ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ನಟಿ ಶ್ರುತಿ ಪುತ್ರಿ ಗೌರಿ

ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ನಟಿ ಶ್ರುತಿ ಪುತ್ರಿ ಗೌರಿ
ಬೆಂಗಳೂರು , ಬುಧವಾರ, 14 ಜುಲೈ 2021 (09:48 IST)
ಬೆಂಗಳೂರು: ಸ್ಯಾಂಡಲ್  ವುಡ್ ನಟಿ ಶ್ರುತಿ ಕೃಷ್ಣ ಮಗಳು ಗೌರಿ ಸಾಮಾಜಿಕ ಜಾಲತಾಣದಲ್ಲಿ ತನ್ನನ್ನು ಟ್ರೋಲ್ ಮಾಡಿದವರಿಗೆ ತಕ್ಕ ತಿರುಗೇಟು ಕೊಟ್ಟಿದ್ದಾರೆ.
Photo Courtesy: Google


ಗೌರಿ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಆಗಾಗ ಹಾಡುಗಳನ್ನು ಹಾಡಿ ವಿಡಿಯೋ ಹಾಕುತ್ತಿರುತ್ತಾರೆ. ಸುಮಧುರ ಕಂಠದ ಗೌರಿ ಈಗ ಮಲಯಾಳಂ ಹಾಡೊಂದನ್ನು ಹಾಡಿ ವಿಡಿಯೋ ಪ್ರಕಟಿಸಿದ್ದಾರೆ.

ಆದರೆ ಇದನ್ನು ನೋಡಿದ ಕೆಲವರು ಪರಭಾಷೆಯ ಹಾಡು ಹಾಡಿದ್ದಕ್ಕೆ ಟ್ರೋಲ್ ಮಾಡಿದ್ದಾರೆ. ಆದರೆ ಇವರ ಕಾಮಂಎಟ್ ನಿಂದ ಬೇಸರಕ್ಕೊಳಗಾದ ಗೌರಿ, ‘ಕೆಲವರ ಕಾಮೆಂಟ್ ನೋಡಿದರೆ ಬೇಸರವಾಗುತ್ತದೆ. ಒಬ್ಬ ಹಾಡುಗಾರ್ತಿಯಾಗಿ ಎಲ್ಲಾ ಹಾಡುಗಳನ್ನು ಹಾಡುವ ಆಸೆ, ಅನಿವಾರ್ಯತೆ ಇರುತ್ತದೆ. ಬೇರೆ ಭಾಷೆಯ ಹಾಡುಗಳನ್ನು ಹಾಡಿದ ಮಾತ್ರಕ್ಕೆ ಕನ್ನಡವನ್ನು ಗೌರವಿಸುವುದಿಲ್ಲ ಎಂದು ಅರ್ಥವಲ್ಲ. ನಾನು ಸಾಕಷ್ಟು ಕನ್ನಡ ಹಾಡನ್ನು ಹಾಡಿದ್ದೇನೆ. ಸಂಗೀತಕ್ಕೆ ಭಾಷೆಯ ಚೌಕಟ್ಟಿಲ್ಲ. ಸಂಗೀತವನ್ನು ಆನಂದಿಸಿ’ ಎಂದು ಗೌರಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತ್ ನಾಗ್ ಗೆ ಪದ್ಮ ಪ್ರಶಸ್ತಿ: ರಿಷಬ್ ಶೆಟ್ಟಿ ಅಭಿಯಾನಕ್ಕೆ ಭಾರೀ ಜನ ಬೆಂಬಲ