Select Your Language

Notifications

webdunia
webdunia
webdunia
webdunia

ಅಂದು ಅಪ್ಪನ ಮುಖವೇ ನೋಡದ ಡ್ರೋನ್ ಪ್ರತಾಪ್, ಈಗ ಹೇಗಿದ್ದಾರೆ ಗೊತ್ತ

Drone Pratap Viral Video

Sampriya

ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2024 (18:52 IST)
Photo Courtesy X
ಡ್ರೋನ್ ಪ್ರತಾಪ್ ಬಿಗ್‌ಬಾಸ್ ಶೋಗೆ ಎಂಟ್ರಿಯಾಗುವ ಮುನ್ನಾ ನಾನಾ ಕಾರಣಕ್ಕೆ ಚರ್ಚೆಯಲ್ಲಿದ್ದವರು. ಅಲ್ಲದೆ ತಮ್ಮ ಪೋಷಕರಿಂದ ದೂರು ಇದ್ದು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ಬಿಗ್‌ಬಾಸ್‌ ಶೋ ಮತ್ತೇ ಪ್ರತಾಪ್ ಅವರನ್ನು ಪೋಷಕರ ಜತೆ ಮಾತನಾಡುವಂತೆ ಮಾಡಿತು. ಇದೀಗ ಪ್ರತಾಪ್ ತಮ್ಮ ಕುಟುಂಬದ ಜತೆ ಸಂತೋಷವಾಗಿ ಬದುಕು ಸಾಗಿಸುತ್ತಿದ್ದಾರೆ.

ತಂದೆ ಜತೆ ಸೇರಿ ಕೃಷಿ ಚಟುವಟಕೆ ಮಾಡುತ್ತಿರುವ ವಿಡಿಯೋವೊಂದನ್ನು ಪ್ರತಾಪ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. 'ಅದಕ್ಕೆ ನನ್ನ ದೇವರು' ಎಂದು ಅಡಿಬರವನ್ನು ನೀಡಿದ್ದಾರೆ.

ಶೇರ್ ಮಾಡಿದ ವಿಡಿಯೋದಲ್ಲಿ ಪ್ರತಾಪ್ ತಮ್ಮ ತಂದೆಯ ಜತೆ ಗದ್ದೆಯಲ್ಲಿ ಎಲೆಯಲ್ಲಿ ಊಟ ಮಾಡುತ್ತಿರುವುದನ್ನು ಕಾಣಬಹುದು.  ‌‌ಅಪ್ಪ ಮಗನ ಬಾಂಧವ್ಯವನ್ನು ನೋಡಿದ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ.

ಸೂಪರ್ ಪ್ರತಾಪ್ ನಿಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ, ಮತ್ತೊಬ್ಬರು ಕೊನೆಗೂ ಅಪ್ಪ ಅಮ್ಮನ ಪ್ರೀತಿಯ ಮಗನಾಗಿದ್ದೀರಿ. ಯಾವಾಗಲೂ ಕುಟುಂಬದ ಜತೆ ಸಂತೋಷದಿಂದಿರಿ, ನಿಮ್ಮ ಕುಟುಂಬಕ್ಕೆ  ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಯಶ್ ಪತ್ನಿ ರಾಧಿಕ ಪಂಡಿತ್‌ರನ್ನು ಎಷ್ಟು ಕೇರ್ ಮಾಡ್ತಾರೇ