Select Your Language

Notifications

webdunia
webdunia
webdunia
webdunia

ನಟ ಯಶ್ ಪತ್ನಿ ರಾಧಿಕ ಪಂಡಿತ್‌ರನ್ನು ಎಷ್ಟು ಕೇರ್ ಮಾಡ್ತಾರೇ

Radhika Pandit

Sampriya

ಮುಂಬೈ , ಬುಧವಾರ, 25 ಸೆಪ್ಟಂಬರ್ 2024 (17:39 IST)
Photo Courtesy X
ಮುಂಬೈ: ಕೆಜಿಎಫ್ ಸಿನಿಮಾ ಮೂಲಕ ದೇಶದಾದ್ಯಂತ ಸಂಚಲನ ಮೂಡಿಸಿದ ನಟ ಯಶ್ ಇದೀಗ ಸದ್ದಿಲ್ಲದೆ ತಮ್ಮ ಮುಂದಿನ ಬಹುನಿರೀಕ್ಷಿತ ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಈ ಮಧ್ಯೆ ನಟ ಯಶ್ ಅವರು ನಿನ್ನೆ ಪತ್ನಿ ರಾಧಿಕಾ ಪಂಡಿತ್ ಜತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿಯೂ ಅಭಿಮಾನದ ಮಳೆಯಲ್ಲಿ ಮಿಂದೆದ್ದಿದ್ದಾರೆ.

ಯಶ್ ಅವರನ್ನು ನೋಡುತ್ತಿದ್ದ ಹಾಗೇ ಅಭಿಮಾನಿಗಳು ಜೋರಾಗಿ ಕೂಗಿದ್ದಾರೆ. ಈ ವೇಳೆ ಪತ್ನಿ ಕೈ ಹಿಡಿದು ಯಶ್ ಕಾರಿನ ಕಡೆ ನಡೆದುಕೊಂಡು ಬರುತ್ತಿದ್ದ ಹಾಗೇ ಅಭಿಮಾನಿಗಳು ರಾಕಿ ಬಾಯ್, ರಾಕಿ ಬಾಯ್ ಎಂದಿದ್ದಾರೆ. ಇದನ್ನು ಕೇಳಿ ಪಾಪರಾಚಿಗಳಿಗೆ ಪೋಸ್ ನೀಡಲು  ಪತ್ನಿ ಜತೆ ಬರುತ್ತಾರೆ. ಆಗ ರಾಧಿಕಾ ನೀವು ಹೋಗಿ, ನಾನು ಕಾರಿನಲ್ಲಿ ಕೂರುತ್ತೇನೆ ಎಂದಾಗ ಯಶ್ ಅವರು ತಾನೇ ಕಾರಿನ ಬಾಗಿಲು ತೆಗೆದು ಪತ್ನಿಯನ್ನು ಕೂರಿಸಿ, ನಂತರ ಪಾಪರಾಚಿಗಳಿಗೆ ಫೋಸ್ ಕೊಡುತ್ತಾರೆ.  

ಈ ಸಂದರ್ಭದಲ್ಲಿ ಕನ್ನಡಿಗರು ಯಶ್ ಅವರನ್ನು ಮಾತನಾಡಿಸಲು ಕಾರಿನಲ್ಲಿಗೆ ಹೋಗುತ್ತಾರೆ. ಶೇಕ್ ಹ್ಯಾಂಡ್ ಮಾಡಿ ಖುಷಿ ವ್ಯಕ್ತಪಡಿಸುತ್ತಾರೆ. ಯಶ್ ಯಾವುದೇ ಅಹಂ ಇಲ್ಲದೆ ಅಲ್ಲಿದ್ದವರಿಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ. ಇನ್ನು ಪಕ್ಕದಲ್ಲೇ ಕುಳಿತಿದ್ದ ರಾಧಿಕಾ ಅವರನ್ನು ಹೇಗಿದ್ದೀರಿ ಮೇಡಂ ಎಂದು ಕೇಳಿದಾಗ ನಗೆ ಬೀರಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊ ನೋಡಿದವರು ಯಶ್ ತಮ್ಮ  ಪತ್ನಿ ರಾಧಿಕಾಳನ್ನು ಎಷ್ಟು ಕೇರ್ ಮಾಡುತ್ತಾರೆ. ನ್ಯಾಶನಲ್ ಸ್ಟಾರ್ ಆದ್ರೂ ಅಭಿಮಾನಿಗಳಿಗೆ ಗೌರವ ಕೊಡುವ ರೀತಿಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಳಸಿ ಗರ್ಭಿಣಿಯಾದ ವಿಚಾರಕ್ಕೆ ವೀಕ್ಷಕರ ಬೈಗುಳಗಳ ಸುರಿಮಳೆ, ಚೇಂಜ್ ಆಯ್ತು ಶ್ರೀರಸ್ತು ಶುಭಮಸ್ತು ಕಥೆ