Select Your Language

Notifications

webdunia
webdunia
webdunia
webdunia

ನಟ ಸುದೀಪ್‌, ಗೋಲ್ಡನ್ ಸ್ಟಾರ್‌ಗೆ ಮದುವೆ ಆಹ್ವಾನ ನೀಡಿದ ಡಾಲಿ ಧನಂಜಯ್‌

Actor Dhananjay Marriage, Actor Kichha Sudeep, Golden Star Ganesh

Sampriya

ಬೆಂಗಳೂರು , ಭಾನುವಾರ, 12 ಜನವರಿ 2025 (17:09 IST)
Photo Courtesy X
ಬೆಂಗಳೂರು: ಫೆ.16ರಂದು ನಟರಾಕ್ಷಸ ಡಾಲಿ ಧನಂಜಯ ಅವರು ಗೆಳತಿ ಧನ್ಯತಾ ಜತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈಗಾಗಲೇ ರಾಜ್ಯ ರಾಜಕೀಯ ನಾಯಕರನ್ನು ಮದುವೆಗೆ ಆಹ್ವಾನಿಸಿರುವ ಧನಂಜಯ್ ಇದೀಗ ಸಿನಿಮಾರಂಗದವರಿಗೆ ಮದುವೆ ಆಮಂತ್ರಣ ನೀಡುತ್ತಿದ್ದಾರೆ.

ಇಂದು ಕಿಚ್ಚ ಸುದೀಪ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಯಲ್ಲಿ ಭೇಟಿಯಾಗಿ ಡಾಲಿ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ಡಾಲಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಜ.11ರಂದು ಮೋಹಕತಾರೆ ರಮ್ಯಾಗೆ ಮದುವೆ ಪತ್ರಿಕೆ ನೀಡಿದ ಬೆನ್ನಲ್ಲೇ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, 'ಬಿಗ್ ಬಾಸ್' ಖ್ಯಾತಿಯ ರಾಜೀವ್ ಸೇರಿದಂತೆ ಅನೇಕರಿಗೆ ಇಂದು (ಜ.12) ಮದುವೆಯ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಈಗಾಗಲೇ ಪ್ರಿಯಾಂಕ ಉಪೇಂದ್ರ ದಂಪತಿ, ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ದಂಪತಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಕುಟುಂಬ, ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್‌ರಾಮ್, ಸಪ್ತಮಿ ಗೌಡ ಸೇರಿದಂತೆ ಅನೇಕರಿಗೆ ಡಾಲಿ ಮದುವೆಗೆ ಆಹ್ವಾನಿಸಿದ್ದಾರೆ.

ಅಂದಹಾಗೆ, ಮೈಸೂರಿನಲ್ಲಿ ಫೆ.16ರಂದು ಡಾಕ್ಟರ್ ಧನ್ಯತಾ ಜೊತೆ ಡಾಲಿ ಹಸೆಮಣೆ ಏರುತ್ತಿದ್ದಾರೆ. ಸ್ಯಾಂಡಲ್‌ವುಡ್ ಕಲಾವಿದರಿಗೆ ಮಾತ್ರವಲ್ಲ. ರಾಜಕೀಯ ಗಣ್ಯರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲೇ ದರ್ಶನ್‌ ಸಂಕ್ರಾಂತಿ ಸಡಗರ: ಬೆಕ್ಕನ್ನು ಎತ್ತಿ ಮುದ್ದಾಡಿದ ಪತ್ನಿ ವಿಜಯಲಕ್ಷ್ಮಿ