Select Your Language

Notifications

webdunia
webdunia
webdunia
webdunia

ನಟಿ ಶ್ರುತಿ ಹಾಸನ್ ಕೆಲವೊಮ್ಮೆ ಚಿತ್ರರಂಗದಿಂದ ದೂರವಾಗುವುದು ಯಾಕೆ ಗೊತ್ತಾ?

webdunia
ಮಂಗಳವಾರ, 24 ನವೆಂಬರ್ 2020 (10:32 IST)
ಚೆನ್ನೈ : ಹಿರಿಯ ನಟ ಕಮಲ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್ ತಮಿಳು, ಹಿಂದಿಯಲ್ಲಿ  ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇಂತಹ ನಟಿಗೆ ಯಾವಾಗಲೂ ಅವಕಾಶ ಸಿಕ್ಕರೂ ಅವರು ಚಿತ್ರರಂಗದಿಂದ ಕೆಲವೊಮ್ಮೆ ದೂರ ಉಳಿಯುತ್ತಿದ್ದರು. ಇದಕ್ಕೆ ಕಾರಣವೇನೆಂಬುದನ್ನು ಇದೀಗ ಅವರು ತಿಳಸಿದ್ದಾರೆ.

ಈ ಹಿಂದೆ ಎರಡು ವರ್ಷಗಳ ಕಾಲ ನಟಿ ಶ‍್ರುತಿ ಚಿತ್ರಗಳಿಂದ ದೂರವಾಗಿದ್ದು, ಕಳೆದ ವರ್ಷ ಮತ್ತೆ ನಟನೆಗೆ ಮರಳಿದ್ದಾರೆ, ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಇದಕ್ಕೆ ನೇರವಾಗಿ ಉತ್ತರ ನೀಡಿದ್ದಾರೆ.

ಈ ಬಗ್ಗೆಮಾತನಾಡಿದ ಅವರು, ನಾನು ನಾಯಕಿ ಮಾತ್ರವಲ್ಲ ಮಾಡೆಲ್, ಸಿಂಗರ್, ಬರವಣಿಗೆ ಹೀಗೆ ಹಲವು ವಿಭಾಗಗಳಲ್ಲಿ ಪ್ರವೀಣಳು. ನನ್ನಲ್ಲಿರುವ ಎಲ್ಲಾ ಪ್ರತಿಭೆಗೆ ನ್ಯಾಯ ಒದಗಿಸಲು ನಾನು ಎಲ್ಲವನ್ನೂ ಮಾಡುತ್ತೇನೆ. ಹಾಗಾಗಿ ಚಿತ್ರರಂಗದಿಂದ ಕೆಲವೊಮ್ಮೆ ದೂರವಾಗುತ್ತೇನೆ ಎಂದು ತಿಳಿಸಿದ್ದಾರೆ.

 
 

Share this Story:

Follow Webdunia Hindi

ಮುಂದಿನ ಸುದ್ದಿ

ವೈರಲ್ ಆಯ್ತು ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿಯ ಆಮ್ಲೆಟ್ ವಿಡಿಯೋ