Publish Date: Wed, 09 Aug 2023 (11:10 IST)
Updated Date: Wed, 09 Aug 2023 (11:13 IST)
ಕೊಚ್ಚಿ: ಹೃದಯಾಘಾತಕ್ಕೊಳಗಾಗಿದ್ದ ಬಾಡಿಗಾರ್ಡ್ ಸಿನಿಮಾ ಖ್ಯಾತಿಯ ನಿರ್ದೇಶಕ ಸಿದ್ದಿಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಸ್ಪಂದನಾ ವಿಜಯ್ ಹೃದಯಾಘಾತದಿಂದ ಹಠಾತ್ ನಿಧನವಾದ ಬೆನ್ನಲ್ಲೇ ನಿರ್ದೇಶಕ ಸಿದ್ದಿಕಿ ಹಠಾತ್ ಸಾವು ದಕ್ಷಿಣ ಭಾರತ ಚಿತ್ರರಂಗಕ್ಕೆ ಶಾಕ್ ನೀಡಿದೆ.
ಸಿದ್ದಿಕಿಗೆ ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮಲಯಾಳಂ, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ನಿರ್ದೇಶಿಸಿದ ಖ್ಯಾತಿ ಅವರದ್ದು.