ಹೈದರಾಬಾದ್: ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬುಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಈ ಬಾರಿ ಫ್ಯಾನ್ಸ್ ಗೆ ದೊಡ್ಡ ಅಪ್ ಡೇಟ್ ಏನೂ ಸಿಗದು.
ಮಹೇಶ್ ಬಾಬುಗೆ ಇಂದು 48 ನೇ ಜನ್ಮದಿನ. ವಯಸ್ಸಾಗುತ್ತಿದ್ದರೂ ಹ್ಯಾಂಡ್ಸಮ್ ಹಂಕ್ ಆಗಿಯೇ ಉಳಿದುಕೊಂಡಿರುವ ಮಹೇಶ್ ಬಾಬು ಈ ಬಾರಿ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತೀ ಬಾರಿ ಅವರ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾಗಳ ಬಗ್ಗೆ ಭರ್ಜರಿ ಅಪ್ ಡೇಟ್ ಸಿಗುತ್ತಿತ್ತು.
ಈ ಬಾರಿ ರಾಜಮೌಳಿ ಜೊತೆ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಅದು ಸುಳ್ಳಾಗಿದೆ. ಆದರೆ ಗುಂಟೂರು ಖಾರಂ ಸಿನಿಮಾ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.