ಚೆನ್ನೈ: ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ಮತ್ತೆ ಸ್ಟಾರ್ ನಟನಿಗೆ ನಾಯಕಿಯಾಗುತ್ತಿದ್ದಾರೆ. ತಮಿಳಿನ ವಿಕ್ರಂ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿದ್ದಾರೆ.
ಕಾಲಿವುಡ್ ನಲ್ಲಿ ಈಗಾಗಲೇ ದಳಪತಿ ವಿಜಯ್ ನಾಯಕರಾಗಿರುವ ಲಿಯೋ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿದ್ದಾರೆ. ಅದಕ್ಕೆ ಮೊದಲು ಕಾರ್ತಿ ಜೊತೆ ಒಂದು ಸಿನಿಮಾ ಮಾಡಿದ್ದರು. ಇದೀಗ ಮತ್ತೆ ಕಾಲಿವುಡ್ ಗೆ ಕಾಲಿಡುತ್ತಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ನ ಹೊಸ ಸಿನಿಮಾದಲ್ಲಿ ವಿಕ್ರಂ, ವಿಜಯ್ ಸೇತುಪತಿ ಮುಂತಾದ ಘಟಾನುಘಟಿ ತಾರಾಗಣವಿದೆ. ಈ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿದ್ದಾರೆ.