ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್ ಹಲವು ದಿನಗಳಿಂದ ಮಾರ್ಟಿನ್ ಬಗ್ಗೆ ಅಪ್ ಡೇಟ್ ನೀಡಿ ಎಂದು ಕೇಳುತ್ತಲೇ ಇದ್ದರು. ಅದೀಗ ನೆರವೇರುತ್ತಿದೆ.
ಧ‍್ರುವ ಸರ್ಜಾ ಮಾತ್ರವಲ್ಲ, ಅವರ ಪತ್ನಿ ಪ್ರೇರಣಾಗೂ ಮಾರ್ಟಿನ್ ಬಗ್ಗೆ ಅಪ್ ಡೇಟ್ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ದಂಬಾಲು ಬಿದ್ದಿದ್ದರು.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಧ್ರುವ ತಮ್ಮ ಉದ್ದನೆಯ ಕೂದಲುಗಳಿಗೆ ಕತ್ತರಿ ಹಾಕುತ್ತಿದ್ದು ಮತ್ತೆ ಮಾರ್ಟಿನ್ ಲುಕ್ ಗೆ ಮರಳಿದ್ದಾರೆ. ಜೊತೆಗೆ ಮಾರ್ಟಿನ್ ಸೆಟ್ ಗೆ ವಾಪಸ್ ಆಗುತ್ತಿರುವುದಾಗಿ ಹೇಳಿದ್ದಾರೆ.