Select Your Language

Notifications

webdunia
webdunia
webdunia
webdunia

ರಾತ್ರಿ ಮಲಗಿದ್ದ ಅತ್ತಿಗೆ ಏಳಲೇ ಇಲ್ಲ! ನಟ ಶ್ರೀಮುರಳಿ ಕಣ್ಣೀರು

ವಿಜಯ್ ರಾಘವೇಂದ್ರ
ಬೆಂಗಳೂರು , ಸೋಮವಾರ, 7 ಆಗಸ್ಟ್ 2023 (12:32 IST)
Photo Courtesy: Twitter
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವು ಅವರ ಕುಟುಂಬಕ್ಕೆ ನಿರೀಕ್ಷಿಸಲಾಗದಷ್ಟು ದುಃಖ ತಂದಿದೆ. ಅತ್ತಿಗೆ ಸಾವಿನ ಬಗ್ಗೆ ವಿಜಯ್ ರಾಘವೇಂದ್ರ ಸಹೋದರ ಶ್ರೀಮುರಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಣ್ಣ ರಾಘು ಕರೆ ಮಾಡಿ ಅತ್ತಿಗೆ ತೀರಿಕೊಂಡ ವಿಷಯ ಹೇಳಿದ್ದಾಗಿ ಹೇಳಿದ್ದಾರೆ. ‘ಅತ್ತಿಗೆ ಕುಟುಂಬಸ್ಥರ ಜೊತೆ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಶೂಟಿಂಗ್ ಇದ್ದ ಕಾರಣ ವಿಜಯ್ ಇಲ್ಲೇ ಇದ್ದರು. ಅವರು ಕೂಡಾ ಈ ಟ್ರಿಪ್ ಗೆ ಜಾಯಿನ್ ಆಗುವವರಿದ್ದರು. ನಿನ್ನೆ ರಾತ್ರಿ ಮಲಗಿದ್ದ ಅತ್ತಿಗೆ ಏಳಲೇ ಇಲ್ಲ. ಲೋ ಬಿಪಿ ಇಂದು ಹೀಗೆ ಆಯಿತು ಎಂದು ಗೊತ್ತಾಯಿತು. ಬಂದ ಮೇಲೆ ಉಳಿದ ಡೀಟೈಲ್ ಗೊತ್ತಾಗುತ್ತೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪಂದನಾ ಡಯಟ್ ಮಾಡ್ತಿರಲಿಲ್ಲ, ಹಾರ್ಟ್ ಪ್ರಾಬ್ಲಂ ಕೂಡಾ ಇರ್ಲಿಲ್ಲ