Publish Date: Sun, 06 Aug 2023 (08:40 IST)
Updated Date: Sun, 06 Aug 2023 (08:58 IST)
ಮುಂಬೈ: ಆದಿಪುರುಷ್ ಸಿನಿಮಾ ಸಾಕಷ್ಟು ಟ್ರೋಲ್, ಆಕ್ರೋಶಕ್ಕೊಳಗಾದ ಬಳಿಕ ರೆಬಲ್ ಸ್ಟಾರ್ ಪ್ರಭಾಸ್ ಎಚ್ಚೆತ್ತುಕೊಂಡಿದ್ದಾರೆ. ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಗೆ ಸೂಪರ್ ಹಿಟ್ ಎನ್ನುವಂತಹ ಸಿನಿಮಾಗಳು ಸಿಕ್ಕಿಲ್ಲ. ಸಾಹೋ, ರಾಧೆ ಶ್ಯಾಮ್ ಎಲ್ಲವೂ ಅವರ ನಾಮಬಲದಿಂದ ತಕ್ಕಮಟ್ಟಿಗೆ ಗಳಿಕೆ ಮಾಡಿಕೊಂಡಿತ್ತಷ್ಟೇ. ಆದಿಪುರುಷ್ ಸಿನಿಮಾ ಅಂತೂ ನೆಟ್ಟಿಗರಿಂದ ತೀವ್ರ ಟ್ರೋಲ್ ಗೊಳಗಾಗಿತ್ತು.
ಆದಿಪುರುಷ್ ವಿವಾದಕ್ಕೀಡಾದ ಬಳಿಕ ಇನ್ನು ಮುಂದೆ ಬಾಲಿವುಡ್ ಮಂದಿಯ ಜೊತೆ ಸಿನಿಮಾ ಮಾಡದೇ ಇರಲು ಪ್ರಭಾಸ್ ತೀರ್ಮಾನಿಸಿದ್ದಾರಂತೆ. ಈಗಾಗಲೇ ಒಪ್ಪಿಕೊಂಡಿದ್ದ ಒಂದು ಸಿನಿಮಾವನ್ನೂ ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.