Select Your Language

Notifications

webdunia
webdunia
webdunia
webdunia

ಅಣ್ಣಾವ್ರ ‘ಕಸ್ತೂರಿ ನಿವಾಸ’ ಸಿನಿಮಾ ಟೈಟಲ್ ಮರುಬಳಕೆ ವಿವಾದ

ಅಣ್ಣಾವ್ರ ‘ಕಸ್ತೂರಿ ನಿವಾಸ’ ಸಿನಿಮಾ ಟೈಟಲ್ ಮರುಬಳಕೆ ವಿವಾದ
ಬೆಂಗಳೂರು , ಸೋಮವಾರ, 31 ಆಗಸ್ಟ್ 2020 (12:28 IST)
ಬೆಂಗಳೂರು: ಅಣ್ಣಾವ್ರ ಸಿನಿಮಾವನ್ನು ಜನಪ್ರಿಯತೆ ಪಡೆಯುವ ಉದ್ದೇಶಕ್ಕೆ ಕೆಲವರು ಮರುಬಳಕೆ ಮಾಡುತ್ತಿರುವುದರ ಬಗ್ಗೆ ಹಿಂದೊಮ್ಮೆ ಡಾ.ರಾಜ್ ಪುತ್ರ ರಾಘವೇಂದ್ರ ರಾಜಕುಮಾರ್ ಧ್ವನಿ ಎತ್ತಿದ್ದರು. ಇದೀಗ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ ‘ಕಸ್ತೂರಿ ನಿವಾಸ’ ಟೈಟಲ್ ಮರುಬಳಕೆ ಮಾಡಲು ಹೊರಟಿರುವ ನಿರ್ದೇಶಕ ದಿನೇಶ್ ಬಾಬು ವಿವಾದಕ್ಕೆ ಸಿಲುಕಿದ್ದಾರೆ.


ದಿನೇಶ್ ಬಾಬು ಹಿರಿಯ ನಿರ್ದೇಶಕ. ಅವರು ಅಣ್ಣಾವ್ರ ಸಿನಿಮಾ ಟೈಟಲ್ ಗೆ ಕಳಂಕ ತರಲ್ಲ ಎಂಬ ನಂಬಿಕೆಯಿದೆಯಾದರೂ, ಇದು ಅಣ್ಣಾವ್ರ ಟ್ರೇಡ್ ಮಾರ್ಕ್ ಸಿನಿಮಾ. ಹೀಗಾಗಿ ಈ ಸಿನಿಮಾದ ಟೈಟಲ್ ಮರುಬಳಕೆ ಮಾಡಬೇಡಿ ಎಂದು ಹಲವರು ಅವರಿಗೆ ಒತ್ತಾಯಿಸಿದರಂತೆ.

ಹೀಗಾಗಿ ದಿನೇಶ್ ಬಾಬು ಈಗ ತಮ್ಮ ಸಿನಿಮಾಗೆ ಹೊಸ ಟೈಟಲ್ ಇಡಲು ತೀರ್ಮಾನಿಸಿದ್ದಾರೆ. ಹೀಗಾಗಿ ಮೊನ್ನೆಯಷ್ಟೇ ಸೆಟ್ಟೇರಿದ ಸಿನಿಮಾಗೆ ಹೊಸ ಟೈಟಲ್ ಸಿಗಲಿದೆ. ಈ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ಸ್ಕಂದ ಅಶೋಕ್, ಶ್ರುತಿ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾ ಬಗ್ಗೆ ನಟ ಚಂದನ್ ಹೇಳಿದ ಸತ್ಯ: ಇಂದ್ರಜಿತ್ ಲಂಕೇಶ್ ಬೆಂಬಲಿಸಿದ ನಟ