ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಬಗ್ಗೆ ಭಾರೀ ಚರ್ಚೆಗಳಾಗುತ್ತಿವೆ. ಇಂದ್ರಜಿತ್ ಲಂಕೇಶ್ ನೀಡಿದ ಸ್ಪೋಟಕ ಹೇಳಿಕೆಗಳು ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ.
ಈ ನಡುವೆ ಕಿರುತೆರೆ, ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಡ್ರಗ್ ಮಾಫಿಯಾದಲ್ಲಿ ಯಾರು ಇದ್ದಾರೋ ಅವರಿಗೆ ತಕ್ಕ ಶಿಕ್ಷೆಯಾಗಲಿ. ಉಳಿದ ಅಮಾಯಕರನ್ನು, ಸಿನಿಮಾ ರಂಗದಲ್ಲಿ ನೆಲೆಯೂರಲು ಕಠಿಣ ಪರಿಶ್ರಮಪಡುತ್ತಿರುವವರನ್ನು ಬಿಡೋಣ. ಡ್ರಗ್ ಅಡಿಕ್ಟ್ ಆದವರನ್ನು, ಪೂರೈಕೆ ಮಾಡುತ್ತಿರುವವರನ್ನು ನಿಷೇಧಿಸೋಣ ಎಂದಿದ್ದಾರೆ. ಜತೆಗೆ ಚಿತ್ರರಂಗದ ಕಸ ತೊಳೆಯಲು ಇಂದ್ರಜಿತ್ ಲಂಕೇಶ್ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ.