Publish Date: Mon, 03 Oct 2022 (08:55 IST)
Updated Date: Mon, 03 Oct 2022 (08:58 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ, ಮೇಘಾ ಶೆಟ್ಟಿ, ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರದಲ್ಲಿರುವ ದಿಲ್ ಪಸಂದ್ ಟೀಸರ್ ಇಂದು ಬಿಡುಗಡೆಯಾಗಲಿದೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡಿತ್ತು. ಈಗ ದಿಲ್ ಪಸಂದ್ ಬಿಡುಗಡೆಗೆ ರೆಡಿಯಾಗಿದೆ. ನವಂಬರ್ 11 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಚಿತ್ರದ ಟೀಸರ್ ಇಂದು 6 ಗಂಟೆಗೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ನಿಶ್ವಿಕಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡರೆ ಮೇಘಾ ಸಾಂಪ್ರದಾಯಿಕ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ
-Edited by Rajesh Patil