Publish Date: Thu, 22 Sep 2022 (09:20 IST)
Updated Date: Thu, 22 Sep 2022 (09:25 IST)
ಬೆಂಗಳೂರು: ನಟ ಧ್ರುವ ಸರ್ಜಾ ಸದ್ಯದಲ್ಲೇ ತಂದೆಯಾಗಲಿದ್ದಾರೆ. ಪತ್ನಿ ಪ್ರೇರಣಾ ಶಂಕರ್ ಅವರ ಸೀಮಂತ ಶಾಸ್ತ್ರ ಇತ್ತೀಚೆಗಷ್ಟೇ ನಡೆದಿತ್ತು.
ಸೆಪ್ಟೆಂಬರ್ ನಲ್ಲಿ ಹೆರಿಗೆಯಾಗಲಿದೆ ಎಂದು ಧ್ರುವ ಕೆಲವು ದಿನಗಳ ಹಿಂದೆ ಮಾಹಿತಿ ನೀಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ಧ್ರುವ ಸರ್ಜಾಗೆ ನಿಮಗೆ ಗಂಡು ಮಗು ಬೇಕೋ, ಹೆಣ್ಣು ಮಗು ಬೇಕೋ ಎಂದು ಪ್ರಶ್ನೆ ಕೇಳಲಾಗಿದೆ.
ಇದಕ್ಕೆ ಉತ್ತರಿಸಿರುವ ಧ್ರುವ ಅಣ್ಣನ ಮಗನೇ ನನಗೂ ಮಗ. ಮನೆಗೆ ಈಗಾಗಲೇ ಒಬ್ಬ ಗಂಡು ಮಗು ಇದ್ದಾನೆ. ಹೀಗಾಗಿ ಈಗ ಹೆಣ್ಣು ಮಗು ಆಗಲಿ ಎಂದು ನನಗೆ ತುಂಬಾ ಆಸೆ ಇದೆ. ಮತ್ತೆ ದೇವರು ಕೊಟ್ಟಿದ್ದು ಏನೇ ಇದ್ರೂ ಖುಷಿಯೇ ಎಂದಿದ್ದಾರೆ.