ಬೆಂಗಳೂರು: ಈ ಬಾರಿ ಆಸ್ಕರ್ ಗೆ ಭಾರತದಿಂದ ಆರ್ ಆರ್ ಆರ್ ಸಿನಿಮಾ ವಿದೇಶೀ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗುತ್ತದೆಂದೇ ಎಲ್ಲರ ನಿರೀಕ್ಷೆಯಾಗಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಗುಜರಾತಿ ಸಿನಿಮಾ ಚೆಲ್ಲೋ ಶೋ ಆಯ್ಕೆಯಾಗಿತ್ತು. ಇದು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಆರ್ ಆರ್ ಆರ್ ತಿರಸ್ಕೃತವಾಗಿದ್ದಕ್ಕೆ ಆಯ್ಕೆ ಸಮಿತಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಸ್ಪಷ್ಟನೆ ನೀಡಿದ್ದಾರೆ.
ಒಂದು ಸಿನಿಮಾ ಆಸ್ಕರ್ ಗೆ ಆಯ್ಕೆಯಾಗಲು ಅದರ ಮಾರ್ಕೆಟಿಂಗ್, ಮಾಸ್ ಅಂಶ ಮುಖ್ಯವಾಗುವುದಿಲ್ಲ. ಕತೆ ಮುಖ್ಯ. ಆಸ್ಕರ್ ಗೆ ಆಯ್ಕೆಯಾಗಲು ಸ್ಪರ್ಧೆಗೆ ಬಂದಿದ್ದ ಎಲ್ಲಾ ಸಿನಿಮಾಗಳೂ ಅತ್ಯುತ್ತಮವಾಗಿತ್ತು. ಆರ್ ಆರ್ ಆರ್ ಕೂಡಾ ಉತ್ತಮ ಸಿನಿಮಾವೇ. ಆದರೆ ಅಂತಿಮವಾಗಿ ಚೆಲ್ಲೋ ಶೋ ಭಾರತವನ್ನು ಪ್ರತಿನಿಧಿಸುವ ಕತೆ ಹೊಂದಿರುವ ಸಿನಿಮಾ, ಒಂದು ವಿಭಿನ್ನ ಸಿನಿಮಾ ಎಂಬ ಕಾರಣಕ್ಕೆ ಆಯ್ಕೆಯಾಯಿತು. ಇದರಿಂದ ಉಳಿದವರಿಗೆ ನಿರಾಸೆಯಾಗಿರಬಹುದು. ಆದರೆ ಚೆಲ್ಲೋ ಶೋ ಭಾರತವನ್ನು ಪ್ರತಿನಿಧಿಸುವ ಒಂದು ವಿಭಿನ್ನ ಸಿನಿಮಾ ಎಂದು ನಾಗಾಭರಣ ಹೇಳಿದ್ದಾರೆ.