Select Your Language

Notifications

webdunia
webdunia
webdunia
webdunia

ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದ ನಟ ರಾಜು ಶ್ರೀವಾಸ್ತವ ಇನ್ನಿಲ್ಲ

ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದ ನಟ ರಾಜು ಶ್ರೀವಾಸ್ತವ ಇನ್ನಿಲ್ಲ
ಮುಂಬೈ , ಬುಧವಾರ, 21 ಸೆಪ್ಟಂಬರ್ 2022 (16:48 IST)
ಮುಂಬೈ: ಜಿಮ್ ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿದ್ದ ನಟ ರಾಜು ಶ್ರೀವಾಸ್ತವ ಬಹಳ ದಿನಗಳ ವೈದ್ಯಕೀಯ ಪ್ರಯತ್ನದ ಫಲವಾಗಿಯೂ ಬದುಕುಳಿಯಲೇ ಇಲ್ಲ. ಇಂದು ಅವರು ನಿಧನರಾಗಿದ್ದಾರೆ.

ರಾಜು ಶ್ರೀವಾಸ್ತವ ಹೃದಯಾಘಾತಕ್ಕೊಳಗಾದ ವಿಚಾರ ಭಾರೀ ಸದ್ದು ಮಾಡಿತ್ತು. ಥೇಟ್ ಪುನೀತ್ ರಾಜ್ ಕುಮಾರ್ ರಂತೇ ಜಿಮ್ ಮಾಡುತ್ತಿದ್ದಾಗ ರಾಜು ಶ್ರೀವಾಸ್ತವ ಕುಸಿದು ಬಿದ್ದಿದ್ದರು. ಆಗಸ್ಟ್ 10 ರಂದು ಈ ಘಟನೆ ನಡೆದಿತ್ತು.

ಇಷ್ಟು ದಿನ ಅವರು ದೆಹಲಿಯ ಏಮ್ಸ್‍ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದೀಗ ಕೊನೆಗೂ ಜೀವನ್ಮರಣದ ಹೋರಾಟದಲ್ಲಿ ಸೋತು ಕೊನೆಯುಸಿರೆಳೆದಿದ್ದಾರೆ. ನಾಳೆ ಅವರ ಅಂತ್ಯಕ್ರಿಯೆ ನೆರವೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಕರ್ ನಿಂದ ಹೊರಬಿದ್ದ ಆರ್ ಆರ್ ಆರ್: ಫ್ಯಾನ್ಸ್ ತೀವ್ರ ಆಕ್ರೋಶ