Publish Date: Tue, 20 Sep 2022 (08:20 IST)
Updated Date: Tue, 20 Sep 2022 (08:48 IST)
ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಹಾಗೂ ಪುತ್ರ ದುಲ್ಕರ್ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಇಬ್ಬರೂ ಸೂಪರ್ ಸ್ಟಾರ್ ಗಳು ಜೊತೆಯಾಗಿ ನಟಿಸಿದರೆ ಹೇಗಿರುತ್ತದೆ?
ದಶಕಗಳಿಂದ ಸಿನಿಮಾ ರಂಗದಲ್ಲಿದ್ದು ದಿಗ್ಗಜ ನಟನಾಗಿದ್ದರೂ ಇಂದಿಗೂ ಮಮ್ಮುಟ್ಟಿಗೆ ಅಷ್ಟೇ ಬೇಡಿಕೆಯಿದೆ. ಆದರೆ ಸೂಪರ್ ಸ್ಟಾರ್ ಮಗನಾಗಿದ್ದರೂ ತಮ್ಮದೇ ಅಭಿನಯದಿಂದಾಗಿ ಜನ ಮನ ಗೆದ್ದಿರುವ ದುಲ್ಕರ್ ಕೂಡಾ ಅಪ್ಪನಂತೇ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಇಬ್ಬರನ್ನೂ ಜೊತೆಯಾಗಿ ತೆರೆ ಮೇಲೆ ನೋಡಬೇಕೆಂಬುದು ಅಭಿಮಾನಿಗಳ ಬಯಕೆ.
ಇದೀಗ ಮಮ್ಮುಟ್ಟಿ ಬಿಲಾಲ್ ಎಂಬ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಈ ಸಿನಿಮಾದಲ್ಲಿ ದುಲ್ಕರ್ ಕೂಡಾ ಅಭಿನಯಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಉತ್ತರಿಸಿರುವ ದುಲ್ಕರ್ ಇದನ್ನು ನಿರ್ದೇಶಕರು ಮತ್ತು ಸ್ಕ್ರಿಪ್ಟ್ ರೈಟರ್ ತೀರ್ಮಾನಿಸಬೇಕು. ಅಪ್ಪನ ಜೊತೆ ಸ್ಕ್ರೀನ್ ಶೇರ್ ಮಾಡಲು ಅವಕಾಶ ಸಿಕ್ಕರೆ ಅದಕ್ಕಿಂತ ಅದೃಷ್ಟ ಇನ್ನೊಂದಿಲ್ಲ ಎಂದಿದ್ದಾರೆ.