Publish Date: Sun, 18 Sep 2022 (18:11 IST)
Updated Date: Sun, 18 Sep 2022 (18:13 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಮೆಚ್ಚಿನ ನಾಯಿ ಬುಲ್ ಬುಲ್. ಅವರು ನಿಧನರಾದಾಗ ಕಣ್ಣೀರು ಹಾಕಿ, ಊಟ ಬಿಟ್ಟು ಕೂತಿದ್ದ ನಾಯಿ ಈಗ ಪ್ರಾಣ ಬಿಟ್ಟಿದೆ.
ಅಂಬಿ ಎಲ್ಲೇ ಹೋದರೂ ಅವರ ಜೊತೆಗೇ ಇರುತ್ತಿದ್ದ ಬುಲ್ ಬುಲ್ ಈಗ ತನ್ನ ಮಾಲಿಕನ ಹಾದಿಯಲ್ಲೇ ಸಾಗಿದೆ. ಬುಲ್ ಬುಲ್ ಮತ್ತು ಕನ್ವರ್ ಹೆಸರಿನ ಎರಡು ನಾಯಿಗಳನ್ನು ಅಂಬಿ ಸಾಕಿದ್ದರು.
ಈ ಪೈಕಿ ಕನ್ವರ್ ಅಂಬಿ ತೀರಿಕೊಂಡ ಕೆಲವೇ ದಿನಗಳಲ್ಲಿ ಊಟ ಬಿಟ್ಟು ಸಾವನ್ನಪ್ಪಿತ್ತು. ಆದರೆ ಬುಲ್ ಬುಲ್ ಇಷ್ಟು ದಿನ ಬದುಕಿತ್ತು. ಈಗ ಬುಲ್ ಬುಲ್ ಕೂಡಾ ಸಾವನ್ನಪ್ಪಿದೆ.